×
Ad

ಒಲಿಂಪಿಕ್ಸ್ : ಇಸ್ರೇಲ್ ಪ್ರತಿಸ್ಪರ್ಧಿಯ ಕೈಕುಲುಕಲು ನಿರಾಕರಿಸಿದ ಈಜಿಪ್ಟ್ ಸ್ಪರ್ಧಿ

Update: 2016-08-12 23:56 IST

ರಿಯೋ ಡಿಜನೈರೊ, ಆ.12: ರಿಯೋ ಒಲಿಂಪಿಕ್ಸ್‌ನ ಜುಡೋ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಸೋತ ಈಜಿಪ್ಟ್‌ನ ಜುಡೋ ಪಟು ಎದುರಾಳಿ ಇಸ್ರೇಲ್ ಆಟಗಾರನ ಕೈ ಕುಲುಕಲು ನಿರಾಕರಿಸಿದ ಪ್ರಸಂಗ ಶುಕ್ರವಾರ ನಡೆದಿದೆ.
ಈಜಿಪ್ಟ್‌ನ ಜುಡೋ ಪಟು ಇಸ್ಲಾಮ್ ಅಲ್ ಶೆಹಾಬಿ ಇಸ್ರೇಲ್‌ನ 5ನೆ ರ್ಯಾಂಕಿನ ಒರ್ ಸಾಸ್ಸನ್ ವಿರುದ್ಧ ಮೊದಲ ಸುತ್ತಿನ ಪಂದ್ಯದಲ್ಲಿ ಸೋತರು. ಪಂದ್ಯ ಮುಗಿದ ಬಳಿಕ ಜುಡೋ ಕ್ರೀಡೆಯ ಸಂಪ್ರದಾಯದಂತೆ ಸಸ್ಸಾನ್‌ರ ಕೈಕುಲುಕಲು ನಿರಾಕರಿಸಿದ ಶೆಹಾಬಿ ಜುಡೋ ನೀತಿ ಸಂಹಿತೆಯನ್ನು ಉಲ್ಲಂಘಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News