×
Ad

ಪದಕ ನಿರೀಕ್ಷೆ ಹುಟ್ಟಿಸಿದ ವಿಕಾಸ್‌ಕೃಷ್ಣ

Update: 2016-08-13 06:27 IST

ರಿಯೊ ಡಿ ಜನೈರೊ: ಒಲಿಂಪಿಕ್ಸ್ ಕ್ರೀಡಾಕೂಟದ ಏಳನೇ ದಿನ ಭಾರತಕ್ಕೆ ಶುಭದಿನವಾಗಿದ್ದು, ಕೆಲ ಪದಕಗಳ ನಿರೀಕ್ಷೆ ಹುಟ್ಟಿದೆ. ಬಾಕ್ಸಿಂಗ್‌ನಲ್ಲಿ ವಿಕಾಸ್‌ಕೃಷ್ಣ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದಿದ್ದರೆ, ಮಿಶ್ರ ಡಬಲ್ಸ್ ಟೆನಿಸ್‌ನಲ್ಲಿ ಸಾನಿಯಾ ಮಿರ್ಜಾ- ರೋಹನ್ ಬೋಪಣ್ಣ ಜೋಡಿ ಸೆಮಿಫೈನಲ್ ಹಂತಕ್ಕೆ ಮುನ್ನಡೆದು ಪದಕ ಬಹುತೇಕ ಖಚಿತಪಡಿಸಿಕೊಂಡಿದೆ.

ಬಾಕ್ಸಿಂಗ್ 75 ಕೆಜಿ ಮಿಡ್ಲ್‌ವೈಟ್ ವಿಭಾಗದಲ್ಲಿ ವಿಕಾಸ್‌ಕೃಷ್ಣಾ ಓಂಡರ್ ಸಿಪಟ್ ವಿರುದ್ಧ 3-0 ಅಂತರದ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಹಂತಕ್ಕೆ ಮುನ್ನಡೆದರು. ಪದಕ ಸಾಧನೆ ಮಾಡಲು ವಿಕಾಸ್‌ಗೆ ಇನ್ನೊಂದೇ ಪಂದ್ಯ ಗೆದ್ದರೆ ಸಾಕು.

ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ- ಬೋಪಣ್ಣ ಜೋಡಿ, ಆಂಡಿ ಮರ್ರೆ- ಹೇತರ್ ವಾಟ್ಸನ್ ಜೋಡಿಯನ್ನು ಸುಲಭವಾಗಿ 6-4, 6-1 ನೇರ ಸೆಟ್‌ಗಳಿಂದ ಸೋಲಿಸಿತು.

ಹಾಕಿ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ಬೆಲ್ಜಿಯಂ ವಿರುದ್ಧ ಸೆಣಸಲಿದೆ. ಪುರುಷರ 20 ಕಿಲೋಮೀಟರ್ ನಡಿಗೆ ಸ್ಪರ್ಧೆಯಲ್ಲಿ ಭಾರತದ ಮನೀಶ್ ಸಿಂಗ್ 13ನೇ ಸ್ಥಾನ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News