ಒಲಿಂಪಿಕ್ಸ್ ಮಿಶ್ರ ಡಬಲ್ಸ್: ಸಾನಿಯಾ-ಬೋಪಣ್ಣ ಸೆಮಿಫೈನಲ್‌ಗೆ
Update: 2016-08-13 11:24 IST
ರಿಯೋ ಡಿ ಜನೈರೊ, ಆ.13: ಭಾರತದ ಟೆನಿಸ್ ತಾರೆಯರಾದ ಸಾನಿಯಾ ಮಿರ್ಝಾ ಮತ್ತು ರೋಹನ್ ಬೋಪಣ್ಣ ಅವರು ಇಲ್ಲಿ ನಡೆಯುತ್ತಿರುವ ರಿಯೋ ಒಲಿಂಪಿಕ್ಸ್‌ನಲ್ಲಿ ಟೆನಿಸ್‌ನ ಮಿಶ್ರ ಡಬಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ವಿಶ್ವದ ನಾಲ್ಕನೆ ಶ್ರೇಯಾಂಕದ ಸಾನಿಯಾ ಮಿರ್ಝಾ ಮತ್ತು ರೋಹನ್ ಬೋಪಣ್ಣ ಅವರು ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಬ್ರಿಟನ್‌ನ ಆಂಡ್ರಿ ಮರ್ರೆ ಮತ್ತು ಹೀದರ್ ವ್ಯಾಟ್ಸನ್ ವಿರುದ್ಧ 6-4, 6-4 ಸೆಟ್‌ಗಳಿಂದ ಜಯ ಗಳಿಸಿ ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಿದರು. ಇದರೊಂದಿಗೆ ಸಾನಿಯಾ-ಬೋಪಣ್ಣ ಅವರು ಭಾರತಕ್ಕೆ ಪದಕದ ಭರ ವಸೆ ಮೂಡಿಸಿದ್ದಾರೆ.