ಸರಣಿ ಗೆಲುವಿನ ಹಾದಿಯಲ್ಲಿ ಭಾರತ
ಗ್ರಾಸ್ ಐಸ್ಲೆಟ್, ಆ.13: ಮೂರನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಗೆಲುವಿಗೆ 354 ರನ್‌ಗಳ ಸವಾಲನ್ನು ಪಡೆದಿರುವ ವೆಸ್ಟ್ ಇಂಡೀಸ್ ತಂಡ ಸಂಕಷ್ಟಕ್ಕೆ ಸಿಲುಕಿದ್ದು, ಭಾರತ ಸರಣಿ ಗೆಲುವಿನ ಹಾದಿಯಲ್ಲಿದೆ.
ವೆಸ್ಟ್ ಇಂಡೀಸ್ ತಂಡ ಎರಡನೆ ಇನಿಂಗ್ಸ್‌ನಲ್ಲಿ 43 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 96 ರನ್ ಗಳಿಸಿದೆ.
ಭಾರತ: 217/7ಟೆಸ್ಟ್‌ನ ಅಂತಿಮ ದಿನವಾಗಿರುವ ಇಂದು ಭಾರತ 48 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 217 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ನಾಲ್ಕನೆ ದಿನದಾಟದಂತ್ಯಕ್ಕೆ ಎರಡನೆ ಇನಿಂಗ್ಸ್‌ನಲ್ಲಿ 39 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 157 ರನ್ ಗಳಿಸಿದ್ದ ಭಾರತ ಅಂತಿಮ ದಿನದಾಟ ಮುಂದುವರಿಸಿ ಈ ಮೊತ್ತಕ್ಕೆ ಕೇವಲ 64 ರನ್ ಸೇರಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ನಾಯಕ ವಿರಾಟ್ ಕೊಹ್ಲಿ ಇನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರ ಕೈಗೊಂಡರು.
ಔಟಾಗದೆ 51 ರನ್ ಗಳಿಸಿದ್ದ ಅಜಿಂಕ್ಯ ರಹಾನೆ ಮತ್ತು 41 ರನ್ ಗಳಿಸಿದ್ದ ರೋಹಿತ್ ಶರ್ಮ ಆಟ ಮುಂದುವರಿಸುವ ಭಾರತಕ್ಕೆ ಆಘಾತ ಕಾದಿತ್ತು. ದಿನದ ಮೊದಲನೆ 2ನೆ ಎಸೆತದಲ್ಲಿ ಕಮಿನ್ಸ್ ಅವರು ರೋಹಿತ್ ಶರ್ಮರನ್ನು ಎಲ್‌ಡಬಿಡಬ್ಲು ಬಲೆಗೆ ಬೀಳಿಸಿದರು.
ರೋಹಿತ್ ಶರ್ಮ ಹಿಂದಿನ ದಿನದ ಮೊತ್ತಕ್ಕೆ ಒಂದು ರನ್ ಸೇರಿಸದೆ ಪೆವಿಲಿಯನ್ ಹಾದಿ ಹಿಡಿದರು. ಬಳಿಕ ಕ್ರೀಸ್‌ಗೆ ಆಗಮಿಸಿದ ವೃದ್ದಿಮಾನ್ ಸಹಾ (14 ರನ್) , ರವೀಂದ್ರ ಜಡೇಜ(16) ಮತ್ತು ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್(1) ಅವರಿಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಆಘಾತ ನೀಡಿದರು. 48 ರನ್‌ಗಳಿಗೆ 6 ವಿಕೆಟ್ ಉಡಾಯಿಸಿ ಕೊಹ್ಲಿ ಪಡೆಯ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು. ಆದರೆ ರಹಾನೆ 78 ರನ್(116ಎ,2ಬೌ) ಗಳಿಸಿ ಔಟಾಗದೆ ಉಳಿದರು. ಇಂದು ಪತನಗೊಂಡ ಭಾರತದ 4 ವಿಕೆಟ್‌ಗಳು ಕಮಿನ್ಸ್ ಖಾತೆಗೆ ಸೇರ್ಪಡೆಗೊಂಡಿತು.
ಭುವಿ ಪ್ರಹಾರ : ವೇಗಿ ಭುವನೇಶ್ವರ ಕುಮಾರ್(33ಕ್ಕೆ 5) ಪ್ರಹಾರಕ್ಕೆ ಸಿಲುಕಿದ ವೆಸ್ಟ್ ಇಂಡೀಸ್ ತಂಡ ಮೊದಲ ಇನಿಂಗ್ಸ್‌ನಲ್ಲಿ103.4 ಓವರ್‌ಗಳಲ್ಲಿ 225 ರನ್‌ಗಳಿಗೆ ಆಲೌಟಾಗಿದ್ದು, ಭಾರತ 128 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ಮೂರನೆ ದಿನದಾಟ ಮಳೆಯಿಂದ ಕೊಚ್ಚಿ ಹೋಗಿತ್ತು. ಎರಡನೆ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 47 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 107 ರನ್ ಗಳಿಸಿದ್ದ ವೆಸ್ಟ್‌ಇಂಡೀಸ್ ತಂಡ ಪಂದ್ಯದ ನಾಲ್ಕನೆ ದಿನವಾಗಿರುವ ಶುಕ್ರವಾರ ಈ ಮೊತ್ತಕ್ಕೆ 118 ರನ್ ಸೇರಿಸಲಷ್ಟೇ ಶಕ್ತವಾಗಿತ್ತು.
ಭುವನೇಶ್ವರ ಕುಮಾರ್(23.4-10-33-5) ಮತ್ತು ಆರ್.ಅಶ್ವಿನ್(52ಕ್ಕೆ 2) ಪ್ರಹಾರಕ್ಕೆ ತತ್ತರಿಸಿದ ವೆಸ್ಟ್‌ಇಂಡೀಸ್ ತಂಡ 103.4 ಓವರ್‌ಗಳಲ್ಲಿ 225 ರನ್‌ಗಳಿಗೆ ಆಲೌಟಾಗಿತ್ತು. ಆರಂಭಿಕ ದಾಂಡಿಗ ಕ್ರೇಗ್ ಬ್ರಾಥ್‌ವೈಟ್(64), ಡರೆನ್ ಬ್ರಾವೊ(29), ಸ್ಯಾಮುಯೆಲ್ಸ್(48), ಬ್ಲಾಕ್‌ವುಡ್ (20) ಮತ್ತು ಡೌರಿಚ್(18) ಎರಡಂಕೆಯ ಕೊಡುಗೆ ನೀಡಿದರು.
ಸಂಕ್ಷಿಪ್ತ ಸ್ಕೋರ್ ವಿವರ
ಭಾರತ ಮೊದಲ ಇನಿಂಗ್ಸ್ 353, ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 103.4 ಓವರ್‌ಗಳಲ್ಲಿ ಆಲೌಟ್ 225(ಕ್ರೇಗ್ ಬ್ರಾಥ್‌ವೈಟ್64, ಡರೆನ್ ಬ್ರಾವೊ 29, ಸ್ಯಾಮುಯೆಲ್ಸ್48, ಬ್ಲಾಕ್‌ವುಡ್ 20, ಜಾನ್ಸನ್ 23 , ಡೌರಿಚ್ 18; ಬಿ.ಕುಮಾರ್ 33ಕ್ಕೆ 5, ಅಶ್ವಿನ್ 52ಕ್ಕೆ 2).
ಭಾರತ ಎರಡನೆ ಇನಿಂಗ್ಸ್ 48 ಓವರ್‌ಗಳಲ್ಲಿ 217/7(ರಹಾನೆ ಔಟಾಗದೆ 78, ರೋಹಿತ್ 41, ರಾಹುಲ್ 28, ಧವನ್ 26; ಕಮಿನ್ಸ್ 48ಕ್ಕೆ 6).
,,,,,,,,,,,,