×
Ad

ನಿವೃತ್ತಿಗೆ ಸಿದ್ಧ: ಮೈಕಲ್ ಫೆಲ್ಪ್ಸ್

Update: 2016-08-13 23:31 IST

ರಿಯೋಡಿ ಜನೈರೊ, ಆ.13: ವಿಶ್ವದಾದ್ಯಂತದ ಸಹಸ್ಪರ್ಧಿಗಳು ಹಾಗೂ ಈಜು ಅಭಿಮಾನಿಗಳ ಒತ್ತಾಯದ ಹೊರತಾಗಿಯೂ ರಿಯೋ ಒಲಿಂಪಿಕ್ಸ್ ಬಳಿಕ ನಿವೃತ್ತಿಯಾಗುವ ಯೋಚನೆಯಲ್ಲಿ ಬದಲಾವಣೆಯಿಲ್ಲ ಎಂದು ಅಮೆರಿಕದ ಚಿನ್ನದ ಮೀನು ಖ್ಯಾತಿಯ ಮೈಕಲ್ ಫೆಲ್ಪ್ಸ್ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಪುರುಷರ 100 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಜಯಿಸುವುದರೊಂದಿಗೆ 27ನೆ ಒಲಿಂಪಿಕ್ಸ್ ಪದಕ ಜಯಿಸಿರುವ ಅಮೆರಿಕದ ಸ್ಟಾರ್ ಸ್ವಿಮ್ಮರ್ ಫೆಲ್ಪ್ಸ್ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂದಿದ್ದಾರೆ.

 ಪತ್ರಕರ್ತರು ನಿವೃತ್ತಿಯ ಬಗ್ಗೆ ಪ್ರಶ್ನೆ ಕೇಳುವ ಮೊದಲೇ ಫೆಲ್ಪ್ಸ್ ಈ ಸ್ಪಷ್ಟನೆ ನೀಡಿದ್ದಾರೆ. ‘‘ಈಜು ಸ್ಪರ್ಧೆಯಲ್ಲಿ ಪದಕ ಸ್ವೀಕರಿಸುವ ಸಂದರ್ಭದಲ್ಲಿ ಸಹ ಈಜುಪಟುಗಳು ಇನ್ನೂ ನಾಲ್ಕು ವರ್ಷ ಸ್ವಿಮ್ಮಿಂಗ್ ಮುಂದುವರಿಯುವಂತೆ ಕೋರಿಕೊಂಡಿದ್ದಾರೆ. ಆದರೆ, ನನ್ನ ನಿರ್ಧಾರದಲ್ಲಿ ಬದಲಾವಣೆಯಿಲ್ಲ’’ಎಂದು ಫೆಲ್ಪ್ಸ್ ಹೇಳಿದರು.

2012ರ ಲಂಡನ್ ಒಲಿಂಪಿಕ್ಸ್‌ನ ಬಳಿಕ ಫೆಲ್ಪ್ಸ್ ನಿವೃತ್ತಿಯಾಗುವುದಾಗಿ ಘೋಷಿಸಿದ್ದರು. ಆದರೆ, ಬಳಿಕ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದಿದ್ದರು. ರಿಯೋದಲ್ಲಿ ಈ ತನಕ 4 ಚಿನ್ನ ಹಾಗೂ 1 ಬೆಳ್ಳಿ ಜಯಿಸಿರುವ ಫೆಲ್ಪ್ಸ್ ಒಲಿಂಪಿಕ್ಸ್‌ವೊಂದರಲ್ಲೇ ಒಟ್ಟು 22 ಚಿನ್ನ ಜಯಿಸಿ ಹೊಸ ದಾಖಲೆ ಬರೆದಿದ್ದಾರೆ.

ಶುಕ್ರವಾರ ಕೊನೆಯ ವೈಯಕ್ತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಫೆಲ್ಪ್ಸ್ ಶನಿವಾರ ತಡರಾತ್ರಿ ನಡೆಯಲಿರುವ 4-100 ಮಿಡ್ಲೆ ರಿಲೇ ವಿದಾಯದ ಪಂದ್ಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News