×
Ad

ರಿಯೋ ಗೇಮ್ಸ್‌ :ಭಾರತದ ಮಹಿಳಾ ಹಾಕಿ ತಂಡದ ಅಭಿಯಾನ ಅಂತ್ಯ

Update: 2016-08-13 23:46 IST

ರಿಯೋ ಡಿ ಜನೈರೊ, ಆ.13: ಗರಿಷ್ಠ ರ್ಯಾಂಕಿನ ಅರ್ಜೆಂಟೀನದ ವಿರುದ್ಧ 5-0 ಅಂತರದಿಂದ ಹೀನಾಯವಾಗಿ ಸೋತಿರುವ ಭಾರತದ ಮಹಿಳಾ ಹಾಕಿ ತಂಡ ರಿಯೋ ಗೇಮ್ಸ್‌ನಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದೆ.

ಶನಿವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಅರ್ಜೆಂಟೀನಕ್ಕೆ ಸುಲಭವಾಗಿ ಶರಣಾಗಿರುವ ಭಾರತ ಆರನೆ ಸ್ಥಾನ ಪಡೆದಿದೆ.

ಜಪಾನ್ ವಿರುದ್ಧದ ಮೊದಲ ಪಂದ್ಯದಲ್ಲಿ 2-2 ರಿಂದ ಡ್ರಾ ಸಾಧಿಸಿದ ಬಳಿಕ ಭಾರತ ಉಳಿದ 4 ಪಂದ್ಯಗಳನ್ನು ಸೋತಿದೆ. ಅರ್ಜೆಂಟೀನದ ಪರ ಮಾರ್ಟಿನಾ(16ನೆ ನಿಮಿಷ, 29ನೆ ನಿ.), ಮರಿಯಾ ಗ್ರಾನಟ್ಟೊ(23ನೆ ನಿ.), ಕಾರ್ಲ ರೆಬೆಚ್ಚಿ(26ನೆ ನಿ.) ಹಾಗೂ ಅಗಸ್ಟಿನಾ ಅಲ್ಬೆರ್ಟರಿಯೊ(27ನೆ) ಗೋಲು ಬಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News