ರಿಯೋ ಗೇಮ್ಸ್: ದ್ಯುತಿ ಫ್ಲಾಪ್ಸ್, ಅನಾಸ್, ಅಂಕಿತ್ ಔಟ್

Update: 2016-08-13 18:18 GMT

ರಿಯೋ ಡಿ ಜನೈರೊ, ಆ.13: ಒಡಿಶಾದ ಓಟಗಾರ್ತಿ ದ್ಯುತಿ ಚಂದ್ ತನ್ನ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ 100 ಮೀ. ಓಟದ ಹೀಟ್ಸ್‌ನಲ್ಲಿ ಏಳನೆ ಸ್ಥಾನ ಪಡೆದು ನಿರಾಸೆ ಮೂಡಿಸಿದ್ದಾರೆ.

36 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ 100 ಮೀ. ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಪಡೆದ ಭಾರತದ ಮೊದಲ ಮಹಿಳಾ ಅಥ್ಲೀಟ್ ಎನಿಸಿಕೊಂಡಿದ್ದ ಚಂದ್ 11.69 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಇದು ಆಕೆಯ ರಾಷ್ಟ್ರೀಯ ದಾಖಲೆ(11.24 ಸೆ.)ಗಿಂತಲೂ ಕಡಿಮೆ ವೇಗವಾಗಿದೆ.

ಕೇರಳದ ಓಟಗಾರ ಮುಹಮ್ಮದ್ ಅನಾಸ್ ಕೂಡ 400 ಮೀ. ಓಟದ ಹೀಟ್ಸ್‌ನಲ್ಲಿ ಸೋತು ಹೊರ ನಡೆದರು. ಲಾಂಗ್ ಜಂಪ್ ಪಟು ಅಂಕಿತ್ ಶರ್ಮ ಫೈನಲ್ ಸುತ್ತಿಗೆ ತಲುಪಲು ವಿಫಲರಾದರು.

 45.95 ಸೆಕೆಂಡ್‌ನಲ್ಲಿ ಗುರಿ ತಲುಪಿದ ಅನಾಸ್ 400 ಮೀ. ಓಟದಲ್ಲಿ ಸ್ಪರ್ಧಿಸಿದ್ದ 50 ಅಥ್ಲೀಟ್‌ಗಳ ಪೈಕಿ 31ನೆ ಸ್ಥಾನ ಪಡೆದರು. ಲಾಂಗ್‌ಜಂಪ್‌ನಲ್ಲಿ ತನ್ನ ಮೂರನೆ ಯತ್ನದಲ್ಲಿ 7.67 ಮೀ.ದೂರ ಜಿಗಿದ ಅಂಕಿತ್ 30 ಸ್ಪರ್ಧಿಗಳ ಪೈಕಿ 12ನೆ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News