ಬಾಕ್ಸರ್ ವಿಕಾಸ್ ಕೃಷ್ಣನ್ ಕ್ವಾರ್ಟರ್‌ಫೈನಲ್‌ಗೆ

Update: 2016-08-13 18:21 GMT

 ರಿಯೋ ಡಿ ಜನೈರೊ, ಆ.13: ರಿಯೋ ಗೇಮ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸುಲಭ ಜಯ ದಾಖಲಿಸಿರುವ ಭಾರತದ ಬಾಕ್ಸರ್ ವಿಕಾಸ್ ಕೃಷ್ಣನ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದರಿಂದ ಇನ್ನು ಒಂದೇ ಹೆಜ್ಜೆ ಹಿಂದಿದ್ದಾರೆ.

 ಶುಕ್ರವಾರ ರಾತ್ರಿ ಏಕಪಕ್ಷೀಯವಾಗಿ ಸಾಗಿದ ಪುರುಷರ 75 ಕೆಜಿ ಮಿಡ್ಲ್‌ವೇಟ್ ಬಾಕ್ಸಿಂಗ್‌ನಲ್ಲಿ ಟರ್ಕಿಯ ಒಂಡರ್ ಸಿಪಾಲ್ ವಿರುದ್ಧ 3-0 ಅಂತರದಿಂದ ಜಯ ಸಾಧಿಸಿದರು.

ಉಜ್ಬೇಕಿಸ್ತಾನದ ಬೆಕ್ಟೆಮಿರ್ ಮೆಲಿಕ್ಯೂಝೀವ್‌ರನ್ನು ಮಣಿಸಲು ಸಫಲವಾದರೆ ಚಿನ್ನದ ಪದಕದೊಂದಿಗೆ ದೇಶಕ್ಕೆ ಮರಳಬಹುದು. ನನಗೆ ಬೆಳ್ಳಿ ಅಥವಾ ಕಂಚು ಜಯಿಸಲು ಇಷ್ಟವಿಲ್ಲ. ನಾನು ಒಂದೋ ಖಾಲಿಕೈಯಲ್ಲಿ ಹೋಗುವೆ ಇಲ್ಲವೇ ಚಿನ್ನದ ಪದಕ ಗೆಲ್ಲುವೆ’’ ಎಂದು 24ರ ಹರೆಯದ ವಿಕಾಸ್ ಹೇಳಿದ್ದಾರೆ. ಕಳೆದ ವರ್ಷ ಥಾಯ್ಲೆಂಡ್‌ನಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಕ್ಟೆಮಿರ್ ಅವರು ವಿಕಾಸ್‌ರನ್ನು ಮಣಿಸಿದ್ದರು.

ವಿಕಾಸ್ ಆಗಸ್ಟ್ 15 ರಂದು ಸೋಮವಾರ ಸಂಜೆ 7 ಗಂಟೆಗೆ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಲಿದ್ದು, ವೈಯಕ್ತಿಕ ಕೋಚ್ ಜಗದೀಪ್ ಹೂಡಾರೊಂದಿಗೆ ರಣತಂತ್ರ ರೂಪಿಸಲು ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News