×
Ad

ದೀಪಾ ಸಾಧನೆಗೆ ಸಚಿನ್ ಶ್ಲಾಘನೆ

Update: 2016-08-15 23:01 IST

ಹೊಸದಿಲ್ಲಿ, ಆ.15: ರಿಯೋ ಒಲಿಂಪಿಕ್ಸ್‌ನಲ್ಲಿ ಕೆಲವೇ ಅಂಕಗಳಿಂದ ಕಂಚಿನ ಪದಕ ವಂಚಿತರಾದ ಜಿಮ್ನಾಸ್ಟಿಕ್ ತಾರೆ ದೀಪಾ ಕರ್ಮಾಕರ್ ಸಾಧನೆಗೆ ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್, ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಹಾಗೂ ಭಾರತದ ಶೂಟರ್ ಅಭಿನವ್ ಬಿಂದ್ರಾ ಶ್ಲಾಘನೆ ವ್ಯಕ್ತಪಡಿಸಿದರು.

 ‘‘ಗೆಲುವು ಹಾಗೂ ಸೋಲು ಕ್ರೀಡೆಯ ಒಂದು ಭಾಗ. ನೀವು ಮಿಲಿಯನ್ ಜನರ ಹೃದಯ ಗೆದ್ದಿದ್ದೀರಿ ಹಾಗೂ ಇಡೀ ದೇಶ ನಿಮ್ಮ ಸಾಧನೆಗೆ ಹೆಮ್ಮೆ ಪಡುತ್ತಿದೆ’’ ಎಂದು ತೆಂಡುಲ್ಕರ್ ಟ್ವೀಟ್ ಮಾಡಿದ್ದಾರೆ.

‘‘ವಿಶ್ವ ಜಿಮ್ನಾಸ್ಟಿಕ್‌ನಲ್ಲಿ ದೇಶದ ತ್ರಿವರ್ಣವನ್ನು ಎತ್ತಿ ಹಿಡಿದ ನಿಮಗೆ ಹಾಗೂ ನಿಮ್ಮ ಕೋಚ್‌ಗೆ ಅಭಿನಂದನೆಗಳು’’ ಎಂದು ಕ್ರಿಕೆಟಿಗ ಶಿಖರ್ ಧವನ್ ಟ್ವಿಟ್ ಮಾಡಿದರು.

‘‘ದೀಪಾ ಕರ್ಮಾಕರ್ ನೀವು ನಮ್ಮ ಹೀರೊ’’ ಎಂದು ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದ ಭಾರತದ ಏಕೈಕ ಶೂಟರ್ ಅಭಿನವ್ ಬಿಂದ್ರಾ ಹೇಳಿದರು.

ದೀಪಾ ಕರ್ಮಾಕರ್ ದೇಶದ ಹೆಮ್ಮೆ....ನಿಮಗೆ ಅಭಿನಂದನೆಗಳು... ಎಂದು ಬಚ್ಚನ್ ಟ್ವೀಟ್ ಮಾಡಿದ್ದಾರೆ.            

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News