400 ಮೀ. ಓಟ: ವಿಶ್ವದಾಖಲೆಯೊಂದಿಗೆ ಬಂಗಾರ ಗೆದ್ದ ನೀಕೆರ್ಕ್
Update: 2016-08-15 23:08 IST
ರಿಯೋ ಡಿ ಜನೈರೊ, ಆ.15: ರಿಯೋ ಒಲಿಂಪಿಕ್ಸ್‌ನ 400 ಮೀ. ಓಟದಲ್ಲಿ ದೀರ್ಘಕಾಲದ ವಿಶ್ವ ದಾಖಲೆಯನ್ನು ಮುರಿದ ದಕ್ಷಿಣ ಆಫ್ರಿಕದ ವೇಯ್ಡಿ ವ್ಯಾನ್ ನೀಕೆರ್ಕ್ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
ರವಿವಾರ ನಡೆದ ಪುರುಷರ 400 ಮೀ. ಓಟದ ಫೈನಲ್‌ನಲ್ಲಿ 43.03 ಸೆಕೆಂಡ್‌ನಲ್ಲಿ ಗುರಿ ತಲುಪಿದ ವ್ಯಾನ್ ನೀಕೆರ್ಕ್ ಚಿನ್ನದ ಪದಕ ಜಯಿಸಿದರು. ಮಾತ್ರವಲ್ಲ 1999ರಲ್ಲಿ ಸೆವಿಲ್ಲೆಯಲ್ಲಿ ಮೈಕಲ್ ಜಾನ್ಸನ್ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು 0.15 ಸೆಕೆಂಡ್ ಅಂತರದಲ್ಲಿ ಮುರಿದು ತನ್ನ ಹೆಸರಿಗೆ ಹೊಸ ದಾಖಲೆ ಬರೆದರು.
ಹಾಲಿ ಚಾಂಪಿಯನ್ ಗ್ರೆನಡಾದ ಕೀರ್ಮಾನಿ ಜೇಮ್ಸ್ 43.76 ಸೆಕೆಂಡ್‌ನಲ್ಲಿ ಗುರಿ ತಲುಪಿ ಬೆಳ್ಳಿಗೆ ತೃಪ್ತಿಪಟ್ಟರು. ಅಮೆರಿಕದ ಲಶಾನ್ ಮೆರಿಟ್(43.85 ಸೆ.) ಕಂಚಿನ ಪದಕ ಗೆದ್ದುಕೊಂಡರು. ಮೆರಿಟ್ 2008ರ ಒಲಿಂಪಿಕ್ಸ್‌ನಲ್ಲಿ ಚಾಂಪಿಯನ್ ಆಗಿದ್ದರು.