×
Ad

ಒಲಿಂಪಿಕ್ಸ್ ಟೆನಿಸ್: ಆ್ಯಂಡಿ ಮರ್ರೆಗೆ ಚಿನ್ನ

Update: 2016-08-15 23:09 IST

ರಿಯೋಡಿ ಜನೈರೊ, ಆ.15: ಬ್ರಿಟನ್‌ನ ಆ್ಯಂಡಿ ಮರ್ರೆ ಒಲಿಂಪಿಕ್ಸ್ ಟೆನಿಸ್ ಫೈನಲ್‌ನಲ್ಲಿ ಅರ್ಜೆಂಟೀನದ ಜುಯಾನ್ ಡೆಲ್ ಪೊಟ್ರೊರನ್ನು ನಾಲ್ಕು ಸೆಟ್‌ಗಳ ಅಂತರದಿಂದ ಮಣಿಸುವುದರೊಂದಿಗೆ ಒಲಿಂಪಿಕ್ಸ್ ಚಿನ್ನದ ಪದಕವನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ.

ರವಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್ ಸುತ್ತಿನ ಪಂದ್ಯದಲ್ಲಿ ಮರ್ರೆ ಅವರು ಪೊಟ್ರೊರನ್ನು 7-5, 4-6, 6-2, 7-5 ಸೆಟ್‌ಗಳ ಅಂತರದಿಂದ ಮಣಿಸಿ ಚಿನ್ನದ ಪದಕ ಬಾಚಿಕೊಂಡರು.

ಜುಲೈನಲ್ಲಿ ಎರಡನೆ ಬಾರಿ ವಿಂಬಲ್ಡನ್ ಪ್ರಶಸ್ತಿಯನ್ನು ಜಯಿಸಿದ ಬಳಿಕ ವಿಶ್ವದ ನಂ.2ನೆ ಆಟಗಾರ ಮರ್ರೆ ಸತತ 18 ಪಂದ್ಯಗಳನ್ನು ಜಯಿಸಿದ್ದಾರೆ. ರಫೆಲ್ ನಡಾಲ್‌ರನ್ನು 6-2, 6-7(1), 6-3 ಸೆಟ್‌ಗಳಿಂದ ಮಣಿಸಿದ ಜಪಾನ್‌ನ ಕೀ ನಿಶಿಕೊರಿ ಕಂಚಿನ ಪದಕ ಜಯಿಸಿದ್ದಾರೆ. ನಡಾಲ್ ಶನಿವಾರ ಮಾರ್ಕ್ ಲೊಪೆಝ್ ಜೊತೆಗೂಡಿ ಪುರುಷರ ಡಬಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News