×
Ad

ಒಲಿಂಪಿಕ್ಸ್ ರೇಸಿನಲ್ಲಿ ಹೀಗೆ ಮಾಡಿಯೂ ಚಿನ್ನ ಗೆಲ್ಲಲು ಉಸೈನ್ ಬೋಲ್ಟ್ ಗೆ ಮಾತ್ರ ಸಾಧ್ಯ !

Update: 2016-08-16 21:20 IST

ರಿಯೋ ಡಿ ಜನೈರೊ, ಆ.16: ಶರವೇಗದ ಸರದಾರ ಜಮೈಕಾದ ಉಸೈನ್ ಬೋಲ್ಟ್ ಅವರು 100 ಮೀಟರ್ ಓಟದ ಸೆಮಿಫೈನಲ್‌ನಲ್ಲಿ ಓಟದ ನಡುವೆಯೂ ವೇಗವನ್ನು ಕಡಿಮೆ ಮಾಡಿ ಕ್ಯಾಮರಾಕ್ಕೆ ಪೋಸ್ ನೀಡಿದ ಬಳಿಕ ಮತ್ತೆ ಓಟ ಮುಂದುವರಿಸಿ ಅಗ್ರ ಸ್ಥಾನದೊಂದಿಗೆ ಫೈನಲ್ ತಲುಪಿದ ವಿಚಾರತಡವಾಗಿ ಬೆಳಕಿಗೆ ಬಂದಿದೆ.

ಗೆಟ್ಟಿ  ಇಮೇಜಸ್‌ನ ಫೋಟೊಗ್ರಾಫರ್ ಕ್ಯಾಮರೊನ್ ಸ್ಪೆನ್ನರ್ ಈ ಅವಕಾಶವನ್ನು ಕಳೆದುಕೊಳ್ಳದೆ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ. ಈ ಚಿತ್ರವನ್ನು ನೋಡಿದ ಅವರ ಅಭಿಮಾನಿಗಳಿಗೆ ಅಚ್ಚರಿ ಉಂಟಾಗಿದೆ. ಓಟವನ್ನು ಅರ್ಧದಲ್ಲಿ ನಿಲ್ಲಿಸಿ ಓಡಲು ಉಸೈನ್‌ಗೆ ಬೋಲ್ಟ್ ೆಮಾತ್ರ ಸಾಧ್ಯ ಎನ್ನುವುದನ್ನು ಬೋಲ್ಟ್ ಸಾಬೀತುಪಡಿಸಿದ್ದಾರೆ.

100 ಮೀಟರ್ ಓಟದ ಫೈನಲ್‌ನಲ್ಲಿ ಉಸೈನ್ ಬೋಲ್ಟ್ 9.81 ಸೆಕೆಂಡ್‌ಗಳಲ್ಲಿ ಗುರಿ ತಲುಪಿಸಿ ಹ್ಯಾಟ್ರಿಕ್ ಚಿನ್ನ ಜಯಿಸಿದ್ದರು. ಅವರು ಸೆಮಿಫೈನಲ್‌ನಲ್ಲಿ 9.86 ಸೆಕೆಂಡ್‌ಗಳಲ್ಲಿ ಫೈನಲ್ ತಲುಪಿದ್ದರು. ಅವರು ಸೆಮಿಫೈನಲ್ ಓಟದ ವೇಳೆಯಲ್ಲಿ ಕ್ಯಾಮರಾಕ್ಕೆ ಪೋಸ್ ಕೊಟ್ಟಿದ್ದ ಫೋಟೊ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News