ಪೆರು: ಭೂಕಂಪಕ್ಕೆ ಕನಿಷ್ಠ ನಾಲ್ವರು ಬಲಿ

Update: 2016-08-16 18:33 GMT

ಲಿಮಾ, ಆ. 16: ಪೆರುವಿನಲ್ಲಿ ರಿಕ್ಟರ್ ಮಾಪಕದಲ್ಲಿ 5.3ರ ತೀವ್ರತೆಯ ಭೂಕಂಪ ಸಂಭವಿಸಿದ್ದು, ಓರ್ವ ಅಮೆರಿಕ ಪ್ರವಾಸಿ ಸೇರಿದಂತೆ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಹಾಗೂ 68 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.

ರವಿವಾರ ರಾತ್ರಿ ಸಂಭವಿಸಿದ ಭೂಕಂಪದಲ್ಲಿ ದಕ್ಷಿಣದ ಅರೆಕ್ಷಿಪ ವಲಯದಲ್ಲಿ 50 ಮನೆಗಳು ಕುಸಿದಿವೆ ಹಾಗೂ ರಸ್ತೆಗಳು ಹಾನಿಗೀಡಾಗಿವೆ. ವಿದ್ಯುತ್ ಕಂಬಗಳು ಧರೆಗುರುಳಿವೆ.

ದುರಂತದಿಂದ ಸಂತ್ರಸ್ತರಾಗಿರುವ ಸುಮಾರು 1,200 ಮಂದಿಗೆ ಸೇನಾ ವಿಮಾನಗಳ ಮೂಲಕ ಆಹಾರ ತಲುಪಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News