×
Ad

ವೀರೇಂದ್ರ ಸೆಹ್ವಾಗ್‌ಗೆ ಎಂಸಿಸಿ ಗೌರವ ಆಜೀವ ಸದಸ್ಯತ್ವ

Update: 2016-08-17 00:20 IST

ಲಂಡನ್, ಆ.16: ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಎಂಸಿಸಿ ಗೌರವ ಆಜೀವ ಸದಸ್ಯತ್ವ ನೀಡಲಾಗಿದೆ.

ಸೆಹ್ವಾಗ್ ಎಂಸಿಸಿ ಸದಸ್ವತ್ವ ಪಡೆದ ಭಾರತದ ನಾಲ್ಕನೆ ಆಟಗಾರನಾಗಿದ್ದಾರೆ. ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ ಹಾಗೂ ಸೌರವ್ ಗಂಗುಲಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಸೆಹ್ವಾಗ್ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಯಶಸ್ಸಿನ ಸವಿ ಉಂಡಿದ್ದಾರೆ. ಟೆಸ್ಟ್‌ನಲ್ಲಿ 50ಕ್ಕೂ ಅಧಿಕ ಸರಾಸರಿಯಲ್ಲಿ 8,586 ರನ್ ಗಳಿಸಿದ್ದಾರೆ.

ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 35.05ರ ಸರಾಸರಿಯಲ್ಲಿ 8,273 ರನ್ ಗಳಿಸಿದ್ದಾರೆ. ಸೆಹ್ವಾಗ್ ಟೆಸ್ಟ್‌ನಲ್ಲಿ ಎರಡು ಬಾರಿ ತ್ರಿಶತಕ ಸಿಡಿಸಿರುವ ಭಾರತದ ಏಕೈಕ ಹಾಗೂ ವಿಶ್ವದ ನಾಲ್ಕನೆ ಬ್ಯಾಟ್ಸ್‌ಮನ್ ಆಗಿದ್ದಾರೆ.

ಸೆಹ್ವಾಗ್ 2004ರಲ್ಲಿ ಮುಲ್ತಾನ್‌ನಲ್ಲಿ ಪಾಕಿಸ್ತಾನದ ವಿರುದ್ಧ ತ್ರಿಶತಕ ಬಾರಿಸಿದ್ದರು. ಕೆಲವು ವರ್ಷಗಳ ಬಳಿಕ ಚೆನ್ನೈನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಮತ್ತೊಮ್ಮೆ ತ್ರಿಶತಕ ಬಾರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News