ಉತ್ತರ ಪ್ರದೇಶದಲ್ಲಿ ಭಾರೀ ಮಳೆಗೆ 13 ಸಾವು
ಲಕ್ನೋ, ಆ.17: ಉತ್ತರ ಪ್ರದೇಶದಲ್ಲಿ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಕನಿಷ್ಠ ಹದಿಮೂರು ಮಂದಿ ಮೃತಪಟ್ಟಿದ್ದಾರೆ.
ರಾಯ್‌ಬರೇಲಿಯಲ್ಲಿ ಭಾರೀ ಮಳೆಯಿಂದಾಗಿ ಮಣ್ಣಿನ ಗೋಡೆಯ ಮನೆ ಕುಸಿದು ಬಿದ್ದು ಆರು ಮಂದಿ ಮೃತಪಟ್ಟರು. ಖುರೆಹಟಿ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಸಾವಿಗೀಡಾದರು.
ಸಿತಪುರ ಜಿಲ್ಲೆಯ ಟೆಡ್ವಾಚಿಲ್ಲಾವುಲಾ ಗ್ರಾಮದಲ್ಲಿ ತಾಯಿ ಹಾಗೂ ಆಕೆಯ ಮಗಳು ಸಿಡಿಲ ಬಡಿತಕ್ಕೆ ಬಲಿಯಾದರು.
ಲಕ್ನೋದಲ್ಲಿ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮವಾಗಿ, ಅದರಡಿಗೆ ಸಿಲುಕಿಕೊಂಡು ಮೃತಪಟ್ಟರು.
ಘಾಗ್ರ ನದಿಯ ಸುತ್ತಮುತ್ತಲಿನ 28ಕ್ಕೂ ಅಧಿಕ ಗ್ರಾಮಗಳಿಗೆ ನೆರೆ ನೀರು ನುಗ್ಗಿದೆ. ಕಾಯಂಪುರದ ಗ್ರಾಮದಲ್ಲಿ ಹಲವು ಮನೆಗಳು ನೆರೆ ನೀರಿನಿಂದಾಗಿ ಕುಸಿದು ಬಿದ್ದಿದೆ.ಕಳೆದ ಐದು ದಿನಗಳಿಂದ ಮಳೆಯಿಂದಾಗಿ ಹೆಚ್ಚು ತೊಂದರೆಗೊಳಗಾಗಿರುವ ಚಿತ್ರಾಕೋಟ್ ಜಿಲ್ಲೆಯಲ್ಲಿ ವಾಹನಗಳ ಓಡಾಟ ಸ್ಥಗಿತಗೊಂಡಿದೆ. ಎನ್‌ಎಚ್ 76ರಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದೆ. ಗಂಗಾ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಯುಮುನಾ ನದಿ ತುಂಬಿ ಹರಿದ ಪರಿಣಾಮವಾಗಿ ಶಾಮ್ಲಿ ಜಿಲ್ಲೆಯ ಕೆಲ್ರಾ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಕೃಷಿ ಭೂಮಿಗೆ ಹಾನಿಯಾಗಿದೆ, ವಾರಣಾಶಿಯಲ್ಲಿ ಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿದೆ.