×
Ad

ವಿಶ್ವ ದಾಖಲೆಯೊಂದಿಗೆ ಚಿನ್ನ ಜಯಿಸಿದ ಜಾರ್ಜಿಯ ವೇಟ್‌ಲಿಫ್ಟರ್

Update: 2016-08-17 23:47 IST

ರಿಯೋ ಡಿ ಜನೈರೊ, ಆ.17: ಜಾರ್ಜಿಯದ ವೇಟ್‌ಲಿಫ್ಟರ್ ಲಾಶಾ ತಲಖಝ್ ಪುರುಷರ +105 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ನಿರ್ಮಿಸುವುದರೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.

ಲಾಶಾ ಒಟ್ಟು 473 ಕೆಜಿ ತೂಕ ಎತ್ತಿಹಿಡಿದು ವಿಶ್ವದಾಖಲೆ ನಿರ್ಮಿಸಿದರು. ಪ್ರತಿಸ್ಪರ್ಧಿ ಅರ್ಮೇನಿಯದ ಮಿನಸಿಯಾನ್‌ರನ್ನು 22 ಕೆಜಿ ಅಂತರದಿಂದ ಸೋಲಿಸಿದರು. ಲಾಶಾ 2000ರ ಸಿಡ್ನಿ ಗೇಮ್ಸ್‌ನಲ್ಲಿ ಇರಾನ್‌ನ ಹುಸೇನ್ ನಿರ್ಮಿಸಿದ್ದ ದಾಖಲೆಯನ್ನು ಮುರಿದರು.

ಇದೇ ವೇಳೆ ಇರಾನ್ ಕೋಚ್‌ಗಳು ಜಾರ್ಜಿಯದ ಲಾಶಾ ಗೆಲುವನ್ನು ಪ್ರಶ್ನಿಸಿ ಗಲಾಟೆ ನಡೆಸಿದ ಕಾರಣ ಒಲಿಂಪಿಕ್ ವೇಟ್‌ಲಿಫ್ಟಿಂಗ್ ಎರೆನಾಕ್ಕೆ ಭದ್ರತಾ ಸಿಬ್ಬಂದಿಗಳನ್ನು ಕರೆಸಬೇಕಾಯಿತು.

ಸಲಿಮಿಯ 254 ಕೆಜಿ ಕ್ಲೀನ್ ಆ್ಯಂಡ್ ಜರ್ಕ್‌ನ ಎರಡನೆ ಯತ್ನವನ್ನು ಮೂರು ತೀರ್ಪುಗಾರರ ಪೈಕಿ ಇಬ್ಬರು ಮಾನ್ಯ ಮಾಡಿದರು. ಆದರೆ, ಇರಾನಿ ವೇಟ್‌ಲಿಫ್ಟರ್ ಎಡಗೈ ನೇರವಾಗಿರಲಿಲ್ಲ ಎಂದು ಐದು ಸದಸ್ಯರ ಜ್ಯೂರಿ ತೀರ್ಪು ನೀಡಿತ್ತು.

ಜ್ಯೂರಿಗಳ ಈ ನಿರ್ಧಾರದ ಹಿಂದೆ ಷಡ್ಯಂತ್ರವಿದೆ ಎಂದು ಸಲಿಮಿಯ ಮುಖ್ಯ ಕೋಚ್ ಸಾಜ್ಜದ್ ಆರೋಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News