×
Ad

ಬೆಲ್ಜಿಯಂಗೆ ಅರ್ಜೆಂಟೀನ ಎದುರಾಳಿ

Update: 2016-08-17 23:59 IST

ರಿಯೋ ಡಿ ಜನೈರೊ, ಆ.17: ವಿಶ್ವದ ದ್ವಿತೀಯ ರ್ಯಾಂಕಿನ ತಂಡ ಹಾಲೆಂಡ್‌ನ್ನು ಮಣಿಸಿದ ಬೆಲ್ಜಿಯಂ ತಂಡ ಪುರುಷರ ಒಲಿಂಪಿಕ್ ಹಾಕಿಯಲ್ಲಿ ಫೈನಲ್‌ಗೆ ತಲುಪಿದೆ.

 ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ತಂಡ ಹಾಲೆಂಡ್‌ನ್ನು 3-1 ಗೋಲುಗಳ ಅಂತರದಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ತೇರ್ಗಡೆಯಾಗಿದ್ದು, ಫೈನಲ್‌ನಲ್ಲಿ ಅರ್ಜೆಂಟೀನವನ್ನು ಎದುರಿಸಲಿದೆ. ಅರ್ಜೆಂಟೀನ ತಂಡ ಹಾಲಿ ಚಾಂಪಿಯನ್ ಜರ್ಮನಿಯನ್ನು 5-2 ಗೋಲುಗಳ ಅಂತರದಿಂದ ಸೋಲಿಸಿ ಫೈನಲ್‌ಗೆ ತಲುಪಿದೆ.

ಮೊತ್ತ ಮೊದಲ ಬಾರಿ ಒಲಿಂಪಿಕ್ ಫೈನಲ್‌ಗೆ ಅರ್ಹತೆ ಪಡೆದಿರುವ ಬೆಲ್ಜಿಯಂನ ಪರ ಜೆರೊಮ್ ಟ್ರುಯೆನ್ಸ್, ಫ್ಲಾರೆಂಟ್ ವ್ಯಾನ್ ಹಾಗೂ ಜಾನ್-ಜಾನ್ ಡೊಮ್ಹೆನ್ ತಲಾ ಒಂದು ಗೋಲು ಬಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News