×
Ad

ಸೈನಾ ಆಸ್ಪತ್ರೆಗೆ ದಾಖಲು

Update: 2016-08-19 00:07 IST

ಹೈದರಾಬಾದ್, ಆ.18: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ರಿಯೋ ಒಲಿಂಪಿಕ್ಸ್‌ನ ವೇಳೆ ಮರುಕಳಿಸಿದ್ದ ಮಂಡಿನೋವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಸೈನಾ ರಿಯೋ ಒಲಿಂಪಿಕ್ಸ್‌ನಲ್ಲಿ ಗಾಯದ ಸಮಸ್ಯೆ ಎದುರಿಸಿದ್ದು, ಗ್ರೂಪ್ ಹಂತದಲ್ಲೇ ವಿಶ್ವದ ನಂ.61ನೆ ಆಟಗಾರ್ತಿ ಮರಿಯಾ ಉಲಿಟಿನಾ ವಿರುದ್ಧ ಸೋತಿದ್ದರು.

ಸೈನಾ ಕಳೆದ ಎರಡು ದಿನಗಳ ಹಿಂದೆಯೇ ಆಸ್ಪತ್ರೆಗೆ ದಾಖಲಾಗಿದ್ದು, ತನ್ನ ಗಾಯದ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯದ ಸಮಸ್ಯೆ ರಿಯೋ ಗೇಮ್ಸ್‌ನಲ್ಲಿ ಉಲ್ಬಣಿಸಿತ್ತು ಎಂದು ಸೈನಾರ ತಂದೆ ಹರ್ವಿರ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News