×
Ad

ಒಲಿಂಪಿಕ್ ಗೇಮ್ಸ್‌: ಕುಸ್ತಿಪಟು ಬಬಿತಾಗೆ ಸೋಲು

Update: 2016-08-19 00:10 IST

ರಿಯೋ ಡಿಜನೈರೊ, ಆ.18: ಭಾರತದ ಕುಸ್ತಿಪಟು ಬಬಿತಾ ಕುಮಾರಿ ಒಲಿಂಪಿಕ್ ಗೇಮ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲೇ ಮುಗ್ಗರಿಸಿದ್ದಾರೆ.

ಗುರುವಾರ ಇಲ್ಲಿ ನಡೆದ ಮಹಿಳೆಯರ 53 ಕೆಜಿ ತೂಕ ವಿಭಾಗ ಪಂದ್ಯದಲ್ಲಿ ಬಬಿತಾ ಗ್ರೀಸ್‌ನ ಮರಿಯಾ ಪ್ರಿವೊಲರಕಿ ವಿರುದ್ಧ 1-5 ಅಂಕಗಳ ಅಂತರದಿಂದ ಸೋತಿದ್ದಾರೆ.

ಈ ಹಿಂದೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಎರಡು ಬಾರಿ ಪದಕ ಜಯಿಸಿರುವ, ನಾಲ್ಕು ವರ್ಷಗಳ ಹಿಂದೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಬಾಚಿಕೊಂಡಿದ್ದ ಬಬಿತಾ ಎದುರಾಳಿ ಗ್ರೀಕ್ ಆಟಗಾರ್ತಿಯ ವಿರುದ್ಧದ ಪಂದ್ಯದಲ್ಲಿ ಅಂಕವನ್ನು ಕಳೆದುಕೊಂಡರು.

ಮರಿಯಾ ಆರಂಭದಲ್ಲೇ 3-0 ಮುನ್ನಡೆ ಸಾಧಿಸಿದರು. ಆರು ವರ್ಷಗಳ ಹಿಂದೆ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಬಬಿತಾಗೆ ಒಂದು ಹಂತದಲ್ಲಿ ತಿರುಗೇಟು ನೀಡುವ ಅವಕಾಶವಿದ್ದರೂ ಅದನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News