ಒಲಿಂಪಿಕ್ಸ್ ನಲ್ಲಿ ವೇಗದ ಗೋಲು ದಾಖಲೆ ಬರೆದ ನೇಮರ್

Update: 2016-08-18 18:57 GMT

 ರಿಯೋ ಡಿ ಜನೈರೊ, ಆ.18:  ಆಟ ಆರಂಭಗೊಂಡ ಹದಿನೈದು ಸೆಕೆಂಡ್‌ಗಳಲ್ಲಿ ಗೋಲು ಬಾರಿಸುವ ಮೂಲಕ ಬ್ರೆಝಿಲ್‌ ತಂಡದ ಸ್ಟಾರ್‌ ಆಟಗಾರ ನೇಮರ್‌  ಒಲಿಂಪಿಕ್ಸ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
 ರಿಯೋ ಒಲಿಂಪಿಕ್ಸ್ ಸೆಮಿಫೈನಲ್ ಪಂದ್ಯದಲ್ಲಿ ನೇಮರ್‌ ವೇಗದ ಗೋಲು ದಾಖಲಿಸಿದರು. ಈ ಗೋಲು ನೆರವಿನಲ್ಲಿ ಬ್ರೆಝಿಲ್‌ ತಂಡ  ಹೊಂಡುರಾಸ್ ನ್ನು 6-0 ಗೋಲುಗಳಿಂದ ಬಗ್ಗುಬಡಿದು ಫೈನಲ್ ಪ್ರವೇಶಿಸಿತು.ಫೈನಲ್​ನಲ್ಲಿ ಬ್ರೆಝಿಲ್‌ ವಿಶ್ವ ಚಾಂಪಿಯನ್ ಜರ್ಮನಿ ತಂಡವನ್ನು   ಎದುರಿಸಲಿದೆ. ಜರ್ಮನಿ ತಂಡ ನೈಜೀರಿಯವನ್ನು ಮಣಿಸಿ ಫೈನಲ್‌ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News