200 ಮೀಟರ್ ಓಟದಲ್ಲಿ ಚಿನ್ನ ಗೆದ್ದ ಉಸೇನ್ ಬೋಲ್ಟ್
Update: 2016-08-19 10:10 IST
ರಿಯೋ ಡಿ ಜನೈರೊ, ಆ.19: ಶರವೇಗದ ಸರದಾರ ಜಮೈಕಾದ ಉಸೇನ್ ಬೋಲ್ಟ್ ಅವರು ರಿಯೋ ಒಲಿಂಪಿಕ್ಸ್ ನ 200ಮೀಟರ್ ಓಟದಲ್ಲಿ ಫೈನಲ್‌ನಲ್ಲಿ ಇಂದು ಸ್ವರ್ಣ ಜಯಿಸಿದ್ದಾರೆ.
ಬೋಲ್ಟ್ ಇದರೊಂದಿಗೆ 200ಮೀಟರ್ ಓಟದಲ್ಲಿ ಸತತ ಮೂರು ಒಲಿಂಪಿಕ್ಸ್ ಗಳಲ್ಲಿ ಚಿನ್ನ ಗೆಲ್ಲುವ ಮೂಲಕ ಹ್ಯಾಟ್ರಿಕ್ ಗಳಿಸಿದ್ದಾರೆ . ರಿಯೋದಲ್ಲಿ ಇದು ಅವರ ಎರಡನೆ ಸ್ವರ್ಣ . ಈ ಮೊದಲು 100 ಮೀಟರ‍್ ಓಟದಲ್ಲೂ ಹ್ಯಾಟ್ರಿಕ್ ಗಳಿಸಿದ್ದರು. ಒಲಿಂಪಿಕ್ಸ್ ಗಳಲ್ಲಿ ಗೆದ್ದಿರುವ ಚಿನ್ನದ ಸಂಖ್ಯೆಯನ್ನು ಎಂಟಕ್ಕೆ ಏರಿಸಿದ್ದಾರೆ. ಅವರು ನಡೆದ 200 ಮೀಟರ್ ಓಟದ ಸ್ಪರ್ಧೆಯಲ್ಲಿ19.78 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಸ್ವರ್ಣಕ್ಕೆ ಮುತ್ತಿಟ್ಟರು.