×
Ad

ಒಲಿಂಪಿಕ್ ಟೇಕ್ವಾಂಡೋದಲ್ಲಿ ಕಂಚು: ಇತಿಹಾಸ ನಿರ್ಮಿಸಿದ ಇರಾನ್‌ನ ಮಹಿಳೆ ಅಲಿಝಾದೆ ಝೆನ್ನೊರೈನ್

Update: 2016-08-19 10:52 IST

ರಿಯೋ ಡಿ ಜನೈರೊ, ಆ.19:ರಿಯೋ ಒಲಿಂಪಿಕ್ಸ್ ನಲ್ಲಿ  ಮಹಿಳೆಯರ ಟೇಕ್ವಾಂಡೋ  57 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಇರಾನ್‌ನ ಕಿಮಿಲಾ ಅಲಿಝಾದೆ  ಝೆನ್ನೊರೈನ್  ಕಂಚು ಜಯಿಸಿದ್ದಾರೆ. ಇದರೊಂದಿಗೆ  ಟೇಕ್ವಾಂಡೋದಲ್ಲಿ  ಕಂಚು ಗೆದ್ದ ಇರಾನ್‌ನ ಮೊದಲ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಹದಿನೆಂಟರ ಹರೆಯದ ಕಿಮಿಲಾ ಅಲಿಝಾದೆ  ಝೆನ್ನೊರೈನ್  ಅವರು  ಗುರುವಾರ ರಾತ್ರಿ ನಡೆದ ಮಹಿಳೆಯರ ಟೇಕ್ವಾಂಡೋ  57ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ  ಸ್ವೀಡನ್ ನ ನಿಕಿತಾ ಗ್ಲಸ್ನೊವಿಕ್‌  ವಿರುದ್ಧ 5-1ಅಂತರದಲ್ಲಿ ಜಯ ಗಳಿಸಿ ಕಂಚು ತನ್ನದಾಗಿಸಿಕೊಂಡರು. ಇದಕ್ಕೂ ಮೊದಲು ಅವರು  ರಿಪಿಚೇಜ್‌  ಸ್ಪರ್ಧೆಯಲ್ಲಿ  ಥಾಯ್‌ಲೆಂಡ್ ನ ಫನಾಪಾ ಹರ‍್ನಸುಜ್ಲಿನ್‌ ವಿರುದ್ಧ 14-10 ಅಂತರದಲ್ಲಿ ಜಯ ಸಾಧಿಸಿ ಕಂಚು ಪದಕ ಸ್ಪರ್ಧೆಗೆ ಅವಕಾಶ ಗಿಟ್ಟಿಸಿಕೊಂಡಿದ್ದರು.
ಕ್ವಾರ್ಟರ‍್ ಫೈನಲ್‌ ನಲ್ಲಿ ಕಿಮಿಲಾ ಅಲಿಝಾದೆ  ಝೆನ್ನೊರೈನ್   ಅವರು ಸ್ಪೇನ್ ನ ಎವಾ ಕಾಲ್ವೊ ಗೊಮೆಝ್‌ ವಿರುದ್ಧ 7-8 ಅಂತರದಿಂದ ಸೋಲು ಅನುಭವಿಸಿದ್ದರು.  ಫೈನಲ್‌ ನಲ್ಲಿ ಗೊಮೆಝ್‌  ಅವರು ಅಮೆರಿಕದ ಫಾಡ ಜೋನ್ಸ್‌ ವಿರುದ್ಧ ಸೋತು ಬೆಳ್ಳಿ ಪಡೆದಿದ್ದಾರೆ.
ಅಲಿಝಾದೆ  ಝೆನ್ನೊರೈನ್  2014ರ ಯೂತ್‌ ಒಲಿಂಪಿಕ್ಸ್ ನಲ್ಲಿ ಪದಕ ಪಡೆದಿದ್ದರು. ವರ್ಲ್ಡ್‌ ಚಾಂಪಿಯನ್ಸ್ ಶಿಪ್‌ನಲ್ಲಿ ಜೋನ್ಸ್ ವಿರುದ್ಧ ಸೋತು ಕಂಚು ಗಿಟ್ಟಿಸಿಕೊಂಡಿದ್ದರು.
ಇರಾನ್ ನ ಅಥ್ಲೀಟ್‌ಗಳು ರಿಯೋ ಒಲಿಂಪಿಕ್ಸ್ ನಲ್ಲಿ ಐದು ಪದಕ ಸಂಪಾದಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News