×
Ad

ಪುರುಷರ ಕುಸ್ತಿ: ಸಂದೀಪ್‌ಗೆ ಸೋಲು

Update: 2016-08-19 23:44 IST

ರಿಯೋ ಡಿ ಜನೈರೊ, ಆ.19: ರಿಯೋ ಒಲಿಂಪಿಕ್ಸ್‌ನ ಪುರುಷರ ಫ್ರೀಸ್ಟೈಲ್ 57 ಕೆಜಿ ತೂಕ ವಿಭಾಗದಲ್ಲಿ ಭಾರತದ ಸಂದೀಪ್ ಥೋಮರ್ ಸೋಲುಂಡಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಅಂತಿಮ 16ರ ಸುತ್ತಿನ ಪಂದ್ಯದಲ್ಲಿ ಸಂದೀಪ್ ಅವರು ರಶ್ಯದ ವಿಕ್ಟರ್ ಲೆಬೆದೇವ್ ವಿರುದ್ಧ 3-7 ಅಂಕಗಳ ಅಂತರದಿಂದ ಸೋತಿದ್ದಾರೆ.

 ರಶ್ಯದ ವಿಕ್ಟರ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋತ ಕಾರಣ ಸಂದೀಪ್‌ಗೆ ರಿಪಿಚೇಜ್ ಸುತ್ತಿನಲ್ಲಿ ಆಡುವ ಅವಕಾಶ ಕೈತಪ್ಪಿದೆ. ವಿಕ್ಟರ್ ಕ್ವಾರ್ಟರ್‌ಫೈನಲ್‌ನಲ್ಲಿ ಹಸನ್ ರಹಿಮಿ ವಿರುದ್ಧ 1-6 ಅಂಕಗಳ ಅಂತರದಿಂದ ಸೋತಿದ್ದಾರೆ.

ಮಹಿಳೆಯರ ಕುಸ್ತಿಸ್ಪರ್ಧೆಯಲ್ಲಿ ಸಾಕ್ಷಿ ಮಲಿಕ್ ಪ್ಲೇ-ಆಫ್ ಪಂದ್ಯದಲ್ಲಿ ಜಯ ಸಾಧಿಸಿ ಭಾರತ ಒಲಿಂಪಿಕ್ಸ್‌ನಲ್ಲಿ ಪದಕ ಖಾತೆ ತೆರಯಲು ನೆರವಾಗಿದ್ದರು.

......

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News