×
Ad

ನಾಲ್ಕನೆ ಟೆಸ್ಟ್: ಮೊದಲದಿನ ಮಳೆಯದ್ದೇ ಆಟ

Update: 2016-08-19 23:45 IST

ಪೋರ್ಟ್ ಆಫ್ ಸ್ಪೇನ್, ಆ.19: ವೆಸ್ಟ್‌ಇಂಡೀಸ್ ಹಾಗೂ ಭಾರತ ನಡುವಿನ ನಾಲ್ಕನೆ ಟೆಸ್ಟ್ ಪಂದ್ಯದ ಮೊದಲ ದಿನ ಮಳೆ ಬಾಧಿತಗೊಂಡಿದ್ದು, ಬ್ಯಾಟಿಂಗ್ ಮಾಡಿದ್ದ ವಿಂಡೀಸ್ 22 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 66 ರನ್ ಕಲೆ ಹಾಕಿದೆ.

ಒದ್ದೆ ಅಂಗಣದಿಂದಾಗಿ ಪಂದ್ಯ ಅರ್ಧಗಂಟೆ ವಿಳಂಬವಾಗಿ ಆರಂಭವಾಗಿತ್ತು. ಟಾಸ್ ಜಯಿಸಿದ ವಿಂಡೀಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಮುರಳಿ ವಿಜಯ್ ಹಾಗೂ ಚೇತೇಶ್ವರ ಪೂಜಾರ ತಂಡಕ್ಕೆ ವಾಪಸಾಗಿದ್ದಾರೆ. ಆತಿಥೇಯ ತಂಡದಲ್ಲಿ ಜೋಸೆಫ್ ಬದಲಿಗೆ ಸ್ಪಿನ್ನರ್ ದೇವೇಂದ್ರ ಬಿಶೂ ತಂಡ ಸೇರಿದ್ದಾರೆ.

 ಭಾರತದ ಸ್ಪಿನ್ನರ್ ಅಶ್ವಿನ್ ವಿಂಡೀಸ್‌ನ ಡ್ವೇಯ್ನಿ ಬ್ರಾವೊ ವಿಕೆಟ್ ಕಬಳಿಸಿದರು. ಜಾನ್ಸನ್ ಹಾಗೂ ಬ್ರಾಥ್‌ವೇಟ್ ಮೊದಲ ವಿಕೆಟ್‌ಗೆ 31 ರನ್ ಜೊತೆಯಾಟ ನಡೆಸಿದ್ದರು. ಜಾನ್ಸನ್ ಅವರು ಇಶಾಂತ್ ಶರ್ಮಗೆ ವಿಕೆಟ್ ಒಪ್ಪಿಸಿದರು.

ಭೋಜನ ವಿರಾಮಕ್ಕೆ 15 ನಿಮಿಷಗಳಿರುವಾಗ ಮಳೆ ಆಗಮಿಸಿತು. ಆಗ ವಿಂಡೀಸ್ 2 ವಿಕೆಟ್‌ಗಳ ನಷ್ಟಕ್ಕೆ 66 ರನ್ ಗಳಿಸಿತ್ತು. ಮಳೆ ಮುಂದುವರಿದ ಕಾರಣ ಪಂದ್ಯವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News