ಲಾಸ್ ಏಂಜಲಿಸ್ ಕಾಡ್ಗಿಚ್ಚು: ಅಗ್ನಿಶಾಮಕ ಸಿಬ್ಬಂದಿ ಕೈಮೇಲು

Update: 2016-08-20 14:58 GMT

ಲಾಸ್ ಏಂಜಲಿಸ್, ಆ. 20: ದಕ್ಷಿಣ ಕ್ಯಾಲಿಫೋರ್ನಿಯ ಬೆಟ್ಟದಲ್ಲಿ ಹೊತ್ತಿಕೊಂಡಿರುವ ಕಾಡ್ಗಿಚ್ಚನ್ನು ನಂದಿಸುವಲ್ಲಿ ಶುಕ್ರವಾರ ಅಗ್ನಿಶಾಮಕ ಸಿಬ್ಬಂದಿಯ ಕೈಮೇಲಾಗಿದೆ.

ಲಾಸ್ ಏಂಜಲಿಸ್‌ನಿಂದ 120 ಕಿ.ಮೀ. ದೂರದಲ್ಲಿರುವ ಕ್ಯಾಜನ್ ಪಾಸ್‌ನಲ್ಲಿರುವ ಕಿರಿದಾದ ಕಣಿವೆಯ ಹಿನ್ನೆಲೆಯಲ್ಲಿ ಕಾಡ್ಗಿಚ್ಚಿಗೆ ‘ಬ್ಲೂ ಕಟ್ ಫಯರ್’ ಎಂಬ ಹೆಸರಿಡಲಾಗಿದೆ. ಕಾಡ್ಗಿಚ್ಚಿನಿಂದಾಗಿ 37,000 ಎಕರೆ ಜಮೀನು ಕರಕಲಾಗಿದೆ.

ಮಂಗಳವಾರ ಕಾಡ್ಗಿಚ್ಚು ಆರಂಭಗೊಂಡ ಬಳಿಕ ಸಾವಿರಾರು ಮಂದಿ ನಿವಾಸಿಗಳು ತಮ್ಮ ಮನೆಗಳನ್ನು ತೊರೆದಿದ್ದಾರೆ ಹಾಗೂ 96 ಏಕ ಕುಟುಂಬ ಮನೆಗಳು ಮತ್ತು 213 ಕಟ್ಟಡಗಳು ನಾಶವಾಗಿವೆ.

ಸುಮಾರು 26 ಶೇಕಡದಷ್ಟು ಬೆಂಕಿ ಹರಡುವುದನ್ನು ನಿಯಂತ್ರಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಮನೆಗಳನ್ನು ತೆರವುಗೊಳಿಸುವಂತೆ 80,000ಕ್ಕೂ ಅಧಿಕ ನಿವಾಸಿಗಳಿಗೆ ಮಂಗಳವಾರ ಸೂಚಿಸಲಾಗಿತ್ತು. ಅಂದಿನಿಂದ ಕೆಲವರಿಗೆ ತಮ್ಮ ಮನೆಗಳಿಗೆ ಮರಳಲು ಅವಕಾಶ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News