×
Ad

ಸಕ್ರಿಯ ಬ್ಯಾಡ್ಮಿಂಟನ್‌ನಿಂದ ಸೈನಾ 4 ತಿಂಗಳು ದೂರ

Update: 2016-08-20 23:07 IST

 ಹೈದರಾಬಾದ್, ಆ.20: ಮುಂಬೈನ ಆಸ್ಪತ್ರೆಯೊಂದರಲ್ಲಿ ಮಂಡಿ ಚಿಕಿತ್ಸೆಗೆ ಒಳಗಾಗಿರುವ ಸೈನಾ ನೆಹ್ವಾಲ್ ನಾಲ್ಕು ತಿಂಗಳ ಕಾಲ ಸಕ್ರಿಯ ಬ್ಯಾಡ್ಮಿಂಟನ್‌ನಿಂದ ದೂರ ಉಳಿಯುವ ಸಾಧ್ಯತೆಯಿದೆ ಎಂದು ನೆಹ್ವಾಲ್ ತಂದೆ ಹರ್ವೀರ್ ಸಿಂಗ್ ಶನಿವಾರ ತಿಳಿಸಿದ್ದಾರೆ.

ಈ ಬೆಳವಣಿಗೆ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾಗೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ.

ತವರು ಪಟ್ಟಣ ಹೈದರಾಬಾದ್‌ಗೆ ವಾಪಸಾಗಲು ಅವಕಾಶ ನೀಡಬೇಕೆಂದು ನಾವು ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯ ವೈದ್ಯರಲ್ಲಿ ವಿನಂತಿಸಿಕೊಂಡಿದ್ದೇವೆ. ಅಲ್ಲಿಯ ವೈದ್ಯಕೀಯ ಉಪಚಾರ ಮುಂದುವರಿಸಲಿದ್ದೇವೆ. ಹಾಗೆ ಮಾಡದಿದ್ದಲ್ಲಿ ನಾಲ್ಕು ತಿಂಗಳ ಕಾಲ ಆಕೆಗೆ ಅಲುಗಾಡಲು ಸಾಧ್ಯವಿಲ್ಲ ಎಂದು ಸಿಂಗ್ ತಿಳಿಸಿದ್ದಾರೆ.

ನಿನ್ನೆ ಸರ್ಜರಿ ನಡೆಸಲಾಗಿತ್ತು. ನಾವು ಆಸ್ಪತ್ರೆಯಲ್ಲೇ ಬ್ಯುಸಿಯಿದ್ದ ಕಾರಣ ಪಿವಿ. ಸಿಂಧು ಅವರ ಒಲಿಂಪಿಕ್ಸ್ ಫೈನಲ್ ಪಂದ್ಯ ವೀಕ್ಷಿಸಲು ಸಾಧ್ಯವಾಗಿಲ್ಲ. ಹೈದರಾಬಾದ್‌ನ ಇಬ್ಬರು ಆಟಗಾರ್ತಿಯರು ಒಲಿಂಪಿಕ್ಸ್ ಪದಕ ಜಯಿಸಿರುವುದು ಸಂತೋಷದ ವಿಷಯ ಎಂದು ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News