×
Ad

ಏಕದಿನ ಕ್ರಿಕೆಟ್: ವಿಶ್ವದಾಖಲೆ ಮುರಿದ ಸ್ಟಾರ್ಕ್

Update: 2016-08-21 23:42 IST

ಕೊಲಂಬೊ, ಆ.21: ಈಗ ನಡೆಯುತ್ತಿರುವ ಶ್ರೀಲಂಕಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್  ವಿಶ್ವದಾಖಲೆಯನ್ನು ಮುರಿದರು.

ಕೇವಲ 52 ಪಂದ್ಯಗಳಲ್ಲಿ 100 ಏಕದಿನ ವಿಕೆಟ್‌ಗಳನ್ನು ಪೂರೈಸಿದ ಆಸ್ಟ್ರೇಲಿಯದ ಎಡಗೈ ವೇಗದ ಬೌಲರ್ ಸ್ಟಾರ್ಕ್ 1995ರಲ್ಲಿ ಪಾಕ್ ಆಫ್ ಸ್ಪಿನ್ನರ್ ಸಕ್ಲೇನ್ ಮುಶ್ತಾಕ್ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದರು. ಮುಶ್ತಾಕ್ ಶ್ರೀಲಂಕಾದ ವಿರುದ್ಧವೇ ಕೇವಲ 52 ಪಂದ್ಯಗಳಲ್ಲಿ 100 ವಿಕೆಟ್‌ಗಳನ್ನು ಉರುಳಿಸಿದ ಸಾಧನೆ ಮಾಡಿದರು.

ಕುಶಾಲ್ ಪೆರೇರ(1) ವಿಕೆಟ್‌ನ್ನು ಉರುಳಿಸಿದ ಸ್ಟಾರ್ಕ್ ಶ್ರೀಲಂಕಾ ವಿರುದ್ಧ ಮೊದಲ ಏಕದಿನವನ್ನು ತನ್ನದೇ ಶೈಲಿಯಲ್ಲಿ ಆರಂಭಿಸಿದರು. ಧನಂಜಯ್ ಸಿಲ್ವಾ ವಿಕೆಟ್‌ನ್ನು ಕಬಳಿಸುವ ಮೂಲಕ ಸ್ಟಾರ್ಕ್ 100 ವಿಕೆಟ್ ಪೂರೈಸಿದರು. ಸ್ಟಾರ್ಕ್ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಒಟ್ಟು 24 ವಿಕೆಟ್ ಉರುಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News