ಜಾವೆಲಿನ್: 80 ವರ್ಷಗಳ ಬಳಿಕ ಮೊದಲ ಚಿನ್ನ ಜಯಿಸಿದ ಜರ್ಮನಿ

Update: 2016-08-21 18:20 GMT

ರಿಯೋ ಡಿಜನೈರೊ, ಆ.21: ಜರ್ಮನಿ ಫುಟ್ಬಾಲ್ ತಂಡ ಒಲಿಂಪಿಕ್ಸ್ ಫೈನಲ್‌ನಲ್ಲಿ ಬ್ರೆಝಿಲ್‌ಗೆ ಶರಣಾಗಿ ನಿರಾಶೆ ಅನುಭವಿಸಿದ ಬೆನ್ನಿಗೆ ಥಾಮಸ್ ರೋಹ್ಲರ್ 80 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಟ್ಟು ದೇಶಕ್ಕೆ ಹೆಮ್ಮೆ ತಂದರು.

ಇಲ್ಲಿ ಶನಿವಾರ ನಡೆದ ಫೈನಲ್ ಸುತ್ತಿನಲ್ಲಿ ರೋಹ್ಲರ್ 90.30 ಮೀ.ದೂರ ಜಾವೆಲಿನ್ ಎಸೆಯುವುದರೊಂದಿಗೆ ಜರ್ಮನಿಗೆ 1936ರ ಬರ್ಲಿನ್ ಒಲಿಂಪಿಕ್ಸ್‌ನ ಬಳಿಕ ಮೊದಲ ಚಿನ್ನದ ಪದಕ ಗೆದ್ದುಕೊಟ್ಟರು. ಬರ್ಲಿನ್ ಗೇಮ್ಸ್‌ನಲ್ಲಿ ಗೆರಾರ್ಡ್ ಸ್ಟಾಕ್ ಸ್ವರ್ಣ ಸಾಧನೆ ಮಾಡಿದ್ದರು. ಕೀನ್ಯದ ಹಾಲಿ ವಿಶ್ವ ಚಾಂಪಿಯನ್ ಜುಲಿಯಸ್ ಯೆಗೊ(88.24 ಮೀ.) ಬೆಳ್ಳಿ ಪದಕವನ್ನು ಜಯಿಸಿದರೆ, ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಟ್ರಿನಿಡಾಡ್ ಆ್ಯಂಡ್ ಟೊಬಾಗೊದ ಕೆಶೊರ್ನ್ ವಾಲ್ಕಟ್(85.83 ಮೀ.) ಕಂಚಿಗೆ ತೃಪ್ತಿಪಟ್ಟರು.

ಮಹಿಳೆಯರ ಹ್ಯಾಂಡ್‌ಬಾಲ್: ರಶ್ಯ ಚಾಂಪಿಯನ್

ರಿಯೋ ಡಿಜನೈರೊ, ಆ.21: ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 22-10 ಅಂತರದಿಂದ ಮಣಿಸಿದ ರಶ್ಯದ ಮಹಿಳಾ ಹ್ಯಾಂಡ್‌ಬಾಲ್ ತಂಡ ಒಲಿಂಪಿಕ್ಸ್ ಚಿನ್ನ ಜಯಿಸಿದೆ. ಸೆಮಿಫೈನಲ್‌ನಲ್ಲಿ ಎರಡು ಬಾರಿಯ ಹಾಲಿ ಚಾಂಪಿಯನ್ ನಾರ್ವೆಯನ್ನು ಹೆಚ್ಚುವರಿ ಸಮಯದಲ್ಲಿ ಮಣಿಸಿದ್ದ ರಶ್ಯ ಟೂರ್ನಿಯಲ್ಲಿ ಅಜೇಯವಾಗುಳಿದಿದೆ.

ಹಾಲೆಂಡ್ ತಂಡವನ್ನು 36-26 ಅಂಕಗಳ ಅಂತರದಿಂದ ಮಣಿಸಿರುವ ನಾರ್ವೆ ಕಂಚಿನ ಪದಕವನ್ನು ಜಯಿಸಿತು...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News