ಸಿಂಧು,ಸಾಕ್ಷಿ,ದೀಪಾ,ಜಿತು ರಾಯ್‌ಗೆ ರಾಜೀವ್ ಖೇಲ್ ರತ್ನ ಪ್ರಶಸ್ತಿ
ಹೊಸದಿಲ್ಲಿ,ಆ.22: ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತರಾದ ಪಿ.ವಿ.ಸಿಂಧು ಮತ್ತು ಸಾಕ್ಷಿ ಮಲಿಕ್,ಕೂದಲೆಳೆಯ ಅಂತರದಲ್ಲಿ ಪದಕವನ್ನು ಕಳೆದುಕೊಂಡ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಮತ್ತು ಶೂಟರ್ ಜಿತು ರಾಯ್‌ಅವರಿಗೆ 2016ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಳನ್ನು ಸರಕಾರವು ಸೋಮವಾರ ಪ್ರಕಟಿಸಿದೆ. ಇದೇ ಮೊದಲ ಬಾರಿಗೆ ದೇಶದ ಅತ್ಯುನ್ನತ ಕ್ರೀಡಾಪ್ರಶಸ್ತಿಯನ್ನು ನಾಲ್ವರು ಅಥ್ಲೀಟ್‌ಗಳಿಗೆ ಘೋಷಿಸಲಾಗಿದೆ.
ಕರ್ಮಾಕರ್ ಅವರ ತರಬೇತುದಾರ ಬಿಶ್ವೇಶ್ವರ ನಂದಿ ಅವರು ಈ ವರ್ಷದ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಾಗಪುರಿ ರಮೇಶ(ಅಥ್ಲೆಟಿಕ್ಸ್),ಸಾಗರ ಮಲ್ ದಯಾಳ(ಬಾಕ್ಸಿಂಗ್),ರಾಜಕುಮಾರ ಶರ್ಮಾ(ಕ್ರಿಕೆಟ್),ಎಸ್.ಪ್ರದೀಪ ಕುಮಾರ್(ಈಜು) ಮತ್ತು ಮಹಾಬೀರ್ ಸಿಂಗ್ (ಕುಸ್ತಿ) ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿರುವ ಇತರ ಕೋಚ್‌ಗಳಾಗಿದ್ದಾರೆ.
15 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿಗಳು ಒಲಿದಿದ್ದು.ಮೂವರು ಧ್ಯಾನಚಂದ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇದೇ ವೇಳೆ ಪಟಿಯಾಳಾದ ಪಂಜಾಬ್ ವಿವಿಯು 2015-16ನೇ ಸಾಲಿನ ವೌಲಾನಾ ಅಬುಲ್ ಕಲಂ ಆಝಾದ್ ಪ್ರಶಸ್ತಿಯನ್ನು ಪಡೆಯಲಿದೆ.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರು ಪದಕ ಮತ್ತು ಪ್ರಶಂಸಾ ಪತ್ರದ ಜೊತೆಗೆ 7.5 ಲ.ರೂ.ನಗದು ಬಹುಮಾನವನ್ನು ಪಡೆಯಲಿದ್ದಾರೆ. ಅರ್ಜುನ, ದ್ರೋಣಾಚಾರ್ಯ ಮತ್ತು ಧ್ಯಾನಚಂದ್ ಪ್ರಶಸ್ತಿ ಪುರಸ್ಕೃತರು ಪ್ರತಿಮಾ ಸ್ಮರಣಿಕೆ, ಪ್ರಮಾಣ ಪತ್ರ ಮತ್ತು ಐದು ಲಕ್ಷ ರೂ.ನಗದು ಬಹುಮಾನವನ್ನು ಪಡೆಯಲಿದ್ದಾರೆ ಎಂದು ಕ್ರೀಡಾ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳಿಗೆ ಕೀಡಾಳುಗಳನ್ನು ದಿಲ್ಲಿ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ನ್ಯಾ.ಎಸ್.ಕೆ.ಅಗರವಾಲ್ ನೇತೃತ್ವದ ಸಮಿತಿಯು ಆಯ್ಕೆ ಮಾಡಿದ್ದರೆ, ಎಂ.ಸಿ.ಮೇರಿ ಕೋಮ್ ನೇತೃತ್ವದ ಸಮಿತಿಯು ದ್ರೋಣಾಚಾರ್ಯ ಮತ್ತು ಧ್ಯಾನಚಂದ್ ಪ್ರಶಸ್ತಿಗಳಿಗೆ ಭಾಜನರನ್ನು ಆಯ್ಕೆ ಮಾಡಿದೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಆ.29ರಂದು ಪ್ರಶಸ್ತಿಗಳನ್ನು ಪ್ರದಾನಿಸಲಿದ್ದಾರೆ. ಪ್ರಶಸ್ತಿಗಳಿಗೆ ಆಯ್ಕೆಯಾದವರ ಸಂಪೂರ್ಣ ಪಟ್ಟಿ
ರಾಜೀವ್ ಗಾಂಧಿ ಖೇಲ್ ರತ್ನ 2016
*ಪಿ.ವಿ.ಸಿಂಧು ಬ್ಯಾಂಡ್ಮಿಂಟನ್
* ಸಾಕ್ಷಿ ಮಲಿಕ್ ಕುಸ್ತಿ
* ದೀಪಾ ಕರ್ಮಾಕರ್ ಜಿಮ್ನಾಸ್ಟಿಕ್ಸ್
* ಜಿತು ರಾಯ್ ಶೂಟಿಂಗ್
ದ್ರೋಣಾಚಾರ್ಯ ಪ್ರಶಸ್ತಿಗಳು 2016
* ನಾಗಪುರಿ ರಮೇಶ ಅಥ್ಲೆಟಿಕ್ಸ್
* ಸಾಗರ ಮಲ್ ದಯಾಳ ಬಾಕ್ಸಿಂಗ್
* ರಾಜಕುಮಾರ ಶರ್ಮಾ ಕ್ರಿಕೆಟ್
* ಬಿಶ್ವೇಶ್ವರ ಪ್ರಸಾದ ನಂದಿ ಜಿಮ್ನಾಸ್ಟಿಕ್ಸ್
* ಎಸ್.ಪ್ರದೀಪ ಕುಮಾರ್ ಈಜು(ಜೀವಿತಾವಧಿ)
* ಮಹಾಬೀರ್ ಸಿಂಗ್ ಕುಸ್ತಿ(ಜೀವಿತಾವಧಿ)
ಅರ್ಜುನ ಪ್ರಶಸ್ತಿಗಳು 2016
* ರಜತ್ ಚೌಹಾಣ್ ಬಿಲ್ಲುಗಾರಿಕೆ
* ಲಲಿತಾ ಬಾಬರ್ ಅಥ್ಲೆಟಿಕ್ಸ್
* ಸೌರವ್ ಕೊಠಾರಿ ಬಿಲಿಯರ್ಡ್ಸ್ ಮತ್ತು ಸ್ನೂಕರ್
* ಶಿವ ಥಾಪಾ ಬಾಕ್ಸಿಂಗ್
* ಅಜಿಂಕ್ಯ ರಹಾನೆ ಕ್ರಿಕೆಟ್
* ರಾಣಿ ಹಾಕಿ
* ಸುಬ್ರತಾ ಪಾಲ್ ಫುಟ್ಬಾಲ್
* ವಿ.ಆರ್.ರಘುನಾಥ ಹಾಕಿ
* ಗುರುಪ್ರೀತ್ ಸಿಂಗ್ ಶೂಟಿಂಗ್
*ಅಪೂರ್ವಿ ಚಂದೇಲಾ ಶೂಟಿಂಗ್
* ಸೌಮ್ಯಜಿತ್ ಘೋಷ್ ಟೇಬಲ್ ಟೆನಿಸ್
* ವಿನೇಶ ಪೋಗಟ್ ಕುಸ್ತಿ
* ಅಮಿತ ಕುಮಾರ ಕುಸ್ತಿ
* ಸಂದೀಪ ಕುಮಾರ್ ಮಾನ್ ಪ್ಯಾರಾ ಅಥ್ಲೆಟಿಕ್ಸ್
* ವಿರೇಂದರ್ ಸಿಂಗ್ ಕಿವುಡ ಕ್ರೀಡಾಪಟು
ಧ್ಯಾನಚಂದ್ ಪ್ರಶಸ್ತಿ 2015
*ಸತ್ತಿ ಗೀತಾ ಅಥ್ಲೆಟಿಕ್ಸ್