×
Ad

ತ್ರಿಪುರಾದಲ್ಲಿ ದೀಪಾಗೆ ಅದ್ದೂರಿ ಸ್ವಾಗತ

Update: 2016-08-22 23:37 IST

ಅಗರ್ತಲ, ಆ.22: ಒಲಿಂಪಿಕ್ ಫೈನಲ್ ತಲುಪಿದ ಭಾರತದ ಮೊದಲ ಜಿಮ್ನಾಸ್ಟಿಕ್ ತಾರೆ ದೀಪಾ ಕರ್ಮಾಕರ್‌ಗೆ ತವರು ರಾಜ್ಯ ತ್ರಿಪುರಾದಲ್ಲಿ ಸೋಮವಾರ ಅದ್ದೂರಿ ಸ್ವಾಗತ ನೀಡಲಾಯಿತು.

ಅಗರ್ತಲ ಏರ್‌ಪೋರ್ಟ್‌ನಲ್ಲಿ ನೂರಾರು ಅಭಿಮಾನಿಗಳು, ಅಧಿಕಾರಿಗಳು, ಹಿತೈಷಿಗಳು ದೀಪಾ ಹಾಗೂ ಅವರ ಕೋಚ್ ಬಿಶ್ವೇಶ್ವರ ನಂದಿಗೆ ಆತ್ಮೀಯ ಸ್ವಾಗತ ನೀಡಿದರು.

ಮುಂಬರುವ ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಹಾಗೂ 2020 ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಶತ ಪ್ರಯತ್ನ ನಡೆಸುವೆ. ರಿಯೋದಲ್ಲಿ ದೇಶದ ಪರ ಪದಕ ಗೆದ್ದುಕೊಂಡಿದ್ದರೆ ತುಂಬಾ ಸಂತೋಷವಾಗುತ್ತಿತ್ತು ಎಂದು ದೀಪಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News