ಎರಡನೆ ಏಕದಿನ ಪಂದ್ಯ: ಆಸ್ಟ್ರೇಲಿಯ ವಿರುದ್ಧ ಲಂಕೆಗೆ 82 ರನ್‌ಗಳ ಜಯ
ಕೊಲಂಬೊ, ಆ.24: ಇಲ್ಲಿ ನಡೆದ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಶ್ರೀಲಂಕಾ 82 ರನ್‌ಗಳ ಭರ್ಜರಿ ಜಯ ಗಳಿಸಿದೆ.
ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡ ಐದು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಇಲ್ಲಿನ ಪ್ರೇಮ್‌ದಾಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 289 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯ ತಂಡ ಅಮಿಲಾ ಅಪೊನ್ಸ್ ಮತ್ತು ಪೆರೆರಾ ದಾಳಿಗೆ ಸಿಲುಕಿ 47.2 ಓವರ್‌ಗಳಲ್ಲಿ 206 ರನ್‌ಗಳಿಗೆ ಆಲೌಟಾಗಿದೆ.
ಅಮಿಲಾ ಅಪೊನ್ಸ್ (18ಕ್ಕೆ 4) ಮತ್ತು ದಿಲ್‌ರುವಾನ್ ಪೆರೆರಾ (33ಕ್ಕೆ 3) ದಾಳಿಗೆ ಸಿಲುಕಿ ಬೇಗನೆ ಆಲೌಟಾಯಿತು.
ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ (76) ಆಸ್ಟ್ರೇಲಿಯದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು.
ಇದಕ್ಕೂ ಮೊದಲು ಶ್ರೀಲಂಕಾ ತಂಡ 48.5 ಓವರ್‌ಗಳಲ್ಲಿ 288 ರನ್‌ಗಳಿಗೆ ಆಲೌಟಾಗಿತ್ತು. ಕುಶಲ್ ಮೆಂಡೀಸ್ (69) ನಾಯಕ ಆ್ಯಂಜೆಲೊ ಮ್ಯಾಥ್ಯೂಸ್(57) ಮತ್ತು ದಿಲ್‌ರುವಾನ್ ಪೆರೆರಾ (54) ಅವರ ಅರ್ಧಶತಕಗಳ ನೆರವು , ವಿಕೆಟ್ ಕೀಪರ್ ದಿನೇಶ್ ಚಾಂಡಿಮಲ್ ನೀಡಿದ ಉಪಯುಕ್ತ 48 ರನ್‌ಗಳ ಕೊಡುಗೆ ನೀಡಿ ಆಸ್ಟ್ರೇಲಿಯಕ್ಕೆ ಕಠಿಣ ಸವಾಲು ವಿಧಿಸಲು ಲಂಕೆಗೆ ನೆರವಾಗಿದ್ದರು.
ಫಾಕ್ನರ್ (45ಕ್ಕೆ 3), ಸ್ಟಾರ್ಕ್ (53ಕ್ಕೆ3), ಝಂಫಾ(42ಕ್ಕೆ 3) ಲಂಕೆಯ ದಾಂಡಿಗರನ್ನು ಕಾಡಿದ್ದರೂ, ಲಂಕೆಗೆ ದೊಡ್ಡ ಮೊತ್ತದ ಸ್ಕೋರ್ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.
ಸಂಕ್ಷಿಪ್ತ ಸ್ಕೋರ್ ವಿವರ
ಶ್ರೀಲಂಕಾ 48.5 ಓವರ್‌ಗಳಲ್ಲಿ ಆಲೌಟ್ 288(ಕುಶಲ್ ಮೆಂಡೀಸ್ 69, ಆ್ಯಂಜೆಲೊ ಮ್ಯಾಥ್ಯೂಸ್ 57, ದಿಲ್‌ರುವಾನ್ ಪೆರೆರಾ 54, ದಿನೇಶ್ ಚಾಂಡಿಮಲ್ 48;ಫಾಕ್ನರ್ 45ಕ್ಕೆ 3, ಸ್ಟಾರ್ಕ್ 53ಕ್ಕೆ3, ಝಂಫಾ ಚ42ಕ್ಕೆ 3)
ಆಸ್ಟ್ರೇಲಿಯ 47.2 ಓವರ್‌ಗಳಲ್ಲಿ 206 ರನ್‌ಗಳಿಗೆ ಆಲೌಟ್(ಮ್ಯಾಥ್ಯೂ ವೇಡ್ 76; ಅಮಿಲಾ ಅಪೊನ್ಸ್ 18ಕ್ಕೆ 4, ಪೆರೆರಾ 33ಕ್ಕೆ 3).
ಪಂದ್ಯಶ್ರೇಷ್ಠ: ಆ್ಯಂಜೊಲೊ ಮ್ಯಾಥ್ಯೂಸ್.