×
Ad

ಅಮೆರಿಕದ ಫುಟ್ಬಾಲ್ ಆಟಗಾರ್ತಿಗೆ ಆರು ತಿಂಗಳು ನಿಷೇಧ

Update: 2016-08-25 13:36 IST

 ಲಾಸ್‌ಏಂಜಲೀಸ್, ಆ.25: ಅಮೆರಿಕದ ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿ ಹೋಪ್ ಸೊಲೊಗೆ ಅಮೆರಿಕದ ಫುಟ್ಬಾಲ್ ಸಂಸ್ಥೆ ರಾಷ್ಟ್ರೀಯ ಫುಟ್ಬಾಲ್‌ಗೆ ಆರು ತಿಂಗಳ ನಿಷೇಧ ವಿಧಿಸಿದೆ.
ಆ.12ರಂದು ನಡೆದ ರಿಯೋ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕ ತಂಡವನ್ನು ಸ್ವೀಡನ್ ಪೆನಾಲ್ಟಿ ಶೂಟೌಟ್‌ನಲ್ಲಿ 4-3 ಅಂತರದಲ್ಲಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿತ್ತು.
 ಈ ಹಂತದಲ್ಲಿ ಹತಾಶಗೊಂಡ ಅಮೆರಿಕ ತಂಡದ ಗೋಲ್ ಕೀಪರ್ ಹೋಪ್ ಸೊಲೊ ಸ್ವೀಡನ್ ಆಟಗಾರ್ತಿಯರನ್ನು ಹೇಡಿಗಳ ಗುಂಪು ಎಂದು ಗೇಲಿ ಮಾಡಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News