×
Ad

ಮಾನವೀಯತೆಯ ಚಾಂಪಿಯನ್ ಆದ ಒಲಿಂಪಿಕ್ ಚಾಂಪಿಯನ್ !

Update: 2016-08-25 23:52 IST

ವಾರ್ಸಾ, ಆ.25: ಕ್ಯಾನ್ಸರ್‌ನಿಂದ ಬಳಲುತ್ತಿರುವ ಮೂರು ವರ್ಷದ ಬಾಲಕನ ಚಿಕಿತ್ಸೆಗೆ ರಿಯೋ ಒಲಿಂಪಿಕ್ಸ್‌ನಲ್ಲಿ ಜಯಿಸಿರುವ ಬೆಳ್ಳಿ ಪದಕವನ್ನು ಮಾರಾಟ ಮಾಡಲು ಪೊಲೆಂಡ್‌ನ ಡಿಸ್ಕಸ್ ಎಸೆತಗಾರ ನಿರ್ಧರಿಸಿದ್ದಾರೆ.

 ‘‘ನೆರವು ಕೋರಿ ಬಾಲಕನ ತಾಯಿಯ ಬರೆದ ಪತ್ರವನ್ನು ಸ್ವೀಕರಿಸಿದ್ದೇನೆ. ಬಾಲಕ ಕಳೆದೆರಡು ವರ್ಷಗಳಿಂದ ಕಣ್ಣಿನಕ್ಯಾನ್ಸರ್‌ನಿಂದ ಬಳಲುತ್ತಿದ್ದು, ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ನಾನು ರಿಯೋದಲ್ಲಿ ಚಿನ್ನಕ್ಕಾಗಿ ಸೆಣಸಾಡಿದ್ದೆ. ಅತ್ಯಂತ ಭಯಾನಕ ಕಾಯಿಲೆ ವಿರುದ್ಧ ಸೆಣಸಾಡುವಂತೆ ನಾನು ಇದೀಗ ಪ್ರತಿಯೊಬ್ಬರಿಗೂ ಕರೆ ನೀಡುವೆ. ಬಾಲಕನ ಚಿಕಿತ್ಸೆಯ ನಿಧಿ ಸಂಗ್ರಹಿಸಲು ಈ ವಾರ ತಾನು ಗೆದ್ದಿರುವ ಬೆಳ್ಳಿ ಪದಕವನ್ನು ಹರಾಜಿಗೆ ಇಡುವೆ’’ಎಂದು 33ರ ಪ್ರಾಯದ ವಿಶ್ವ ಚಾಂಪಿಯನ್ ಪಿಯಟ್ರ್ ಮಲಾಚೊವಿಸ್ಕಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News