×
Ad

ಬಿಡಬ್ಲುಎಫ್ ರ್ಯಾಂಕಿಂಗ್: 9ನೆ ಸ್ಥಾನಕ್ಕೆ ಜಾರಿದ ಸೈನಾ

Update: 2016-08-25 23:59 IST

ಹೊಸದಿಲ್ಲಿ, ಆ.25: ಬ್ಯಾಡ್ಮಿಂಟನ್ ವಿಶ್ವ ಫೆಡರೇಶನ್(ಬಿಡಬ್ಲುಎಫ್) ಗುರುವಾರ ಬಿಡುಗಡೆ ಮಾಡಿರುವ ರ್ಯಾಂಕಿಂಗ್‌ನಲ್ಲಿ ಭಾರತದ ಸೈನಾ ನೆಹ್ವಾಲ್ ನಾಲ್ಕು ಅಂಕ ಕಳೆದುಕೊಂಡು 9ನೆ ಸ್ಥಾನಕ್ಕೆ ಕುಸಿದಿದ್ದಾರೆ. ಇತ್ತೀಚೆಗೆ ಕೊನೆಗೊಂಡ ರಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಹೊರತಾಗಿಯೂ ಪಿ.ವಿ.ಸಿಂಧು ರ್ಯಾಂಕಿಂಗ್‌ನಲ್ಲಿ 10ನೆ ಸ್ಥಾನದಲ್ಲೇ ಉಳಿದಿದ್ದಾರೆ.

ಭಾರತದ ಬ್ಯಾಡ್ಮಿಂಟನ್‌ಗೆ ಮತ್ತೊಂದು ಕಹಿ ಸುದ್ದಿಯೆಂದರೆ, ಮಹಿಳೆಯರ ಡಬಲ್ಸ್ ಜೋಡಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ 26ನೆ ಸ್ಥಾನ ಜಾರಿದ್ದಾರೆ. ಈ ಜೋಡಿ ರಿಯೋ ಗೇಮ್ಸ್‌ನಲ್ಲಿ ನಾಕೌಟ್ ಹಂತ ತಲುಪಲು ವಿಫಲವಾದ ಕಾರಣ ನಾಲ್ಕು ಸ್ಥಾನ ಕಳೆದುಕೊಂಡಿದೆ.

ಇದೇ ವೇಳೆ, ಪುರುಷರ ಸಿಂಗಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್ 10ನೆ ಸ್ಥಾನಕ್ಕೇರಿದ್ದಾರೆ. ಶ್ರೀಕಾಂತ್ ರಿಯೋ ಗೇಮ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದರು. ಅಜಯ್ ಜಯರಾಮ್ 22ನೆ ರ್ಯಾಂಕಿಗೆ ತಲುಪಿದ್ದಾರೆ.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಸೈನಾ ರಿಯೋ ಒಲಿಂಪಿಕ್ಸ್‌ನಲ್ಲಿ ಗ್ರೂಪ್ ಹಂತ ದಾಟಲು ವಿಫಲರಾಗಿದ್ದರು. ರಿಯೋದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕಾರಣ 9ನೆ ಸ್ಥಾನಕ್ಕೆ ಹಿಂಭಡ್ತಿ ಪಡೆದಿದ್ದಾರೆ. ಜಪಾನ್‌ನ ನೊರೊಮಿ ಒಕಹರಾ ಹಾಗೂ ಚೀನಾದ ಶಿಕ್ಸಿಯಾನ್ ವಾಂಗ್ ಕ್ರಮವಾಗಿ 3ನೆ ಹಾಗೂ 6ನೆ ಸ್ಥಾನದಲ್ಲಿದ್ದಾರೆ.

 ರಿಯೋ ಗೇಮ್ಸ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ್ದ ಚೀನಾ ಲೀ ಕ್ಸುರುಯಿ 2ನೆ ಸ್ಥಾನದಲ್ಲೂ, ಸಿಂಧು ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ ಸೋತಿದ್ದ ಯೀಹಾನ್ ವಾಂಗ್ 2 ಸ್ಥಾನ ಕಳೆದುಕೊಂಡು 4ನೆ ಸ್ಥಾನಕ್ಕೆ ಕುಸಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News