ಸ್ಪೇನ್ ವಿರುದ್ಧದ ಡೇವಿಸ್ ಕಪ್: ಭಾರತ ತಂಡದಲ್ಲಿ ಬದಲಾವಣೆಯಿಲ್ಲ

Update: 2016-08-26 18:18 GMT

ಹೊಸದಿಲ್ಲಿ, ಆ.26: ಮುಂಬರುವ ಸ್ಪೇನ್ ವಿರುದ್ಧದ ಡೇವಿಸ್‌ಕಪ್ ವರ್ಲ್ಡ್ ಗ್ರೂಪ್ ಪ್ಲೇ-ಆಫ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಗೆಲುವು ಸಾಧಿಸಿದ ತಂಡವನ್ನೇ ಕಣಕ್ಕಿಳಿಸಲು ಭಾರತ ನಿರ್ಧರಿಸಿದೆ.

ಜುಲೈನಲ್ಲಿ ನಡೆದಿದ್ದ ಡೇವಿಸ್‌ಕಪ್ ಪಂದ್ಯದಲ್ಲಿ ದಕ್ಷಿಣಕೊರಿಯಾವನ್ನು ಮಣಿಸಿದ್ದ ಭಾರತ ತಂಡದಲ್ಲಿ ಆಡಿರುವ ಯೂಕಿ ಭಾಂಬ್ರಿ ಹಾಗೂ ಸೋಮ್‌ದೇವ ದೇವ್‌ವರ್ಮನ್ ಇನ್ನೂ ಗಾಯದಿಂದ ಚೇತರಿಸಿಕೊಳ್ಳದಿದ್ದರೂ ಇಬ್ಬರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಯುರೋಪ್‌ನ ಬಲಿಷ್ಠ ತಂಡ ಸ್ಪೇನ್ ವಿರುದ್ಧ ಸೆ.16 ರಿಂದ 18ರ ತನಕ ಪಂದ್ಯ ನಡೆಯುವುದು.

ಸಾಕೇತ್ ಮೈನೇನಿ ಹಾಗೂ ರಾಮ್‌ಕುಮಾರ್ ರಾಮನಾಥನ್ ಸಿಂಗಲ್ಸ್ ಪಂದ್ಯವನ್ನು ಆಡಲಿದ್ದಾರೆ. ಭಾರತದ ಟೆನಿಸ್ ದಂತಕತೆ ಲಿಯಾಂಡರ್ ಪೇಸ್ ಕನ್ನಡಿಗ ರೋಹನ್ ಬೋಪಣ್ಣ ಜೊತೆ ಡಬಲ್ಸ್ ಪಂದ್ಯ ಆಡಲಿದ್ದಾರೆ. ಪೇಸ್ ಹಾಗೂ ಬೋಪಣ್ಣ ಜೋಡಿ ರಿಯೋ ಒಲಿಂಪಿಕ್ಸ್ ಮೊದಲಸುತ್ತಿನ ಪಂದ್ಯದಲ್ಲೇ ಮುಗ್ಗರಿಸಿತ್ತು.

ಭಾರತಕ್ಕೆ ಮುಂಬರುವ ಸ್ಪೇನ್ ವಿರುದ್ಧದ ಪಂದ್ಯ ಅತ್ಯಂತ ಸವಾಲಿನಿಂದ ಕೂಡಿದೆ. ಸ್ಪೇನ್‌ನ 12 ಆಟಗಾರರು ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ ಅಗ್ರ-100ರಲ್ಲಿ ಸ್ಥಾನ ಪಡೆದಿದ್ದಾರೆ. ವರ್ಷದ ಕೊನೆಯ ಗ್ರಾನ್‌ಸ್ಲಾಮ್ ಟೂರ್ನಿ ಯುಎಸ್ ಓಪನ್‌ನಲ್ಲಿ ಸ್ಪೇನ್‌ನ ಸೂಪರ್‌ಸ್ಟಾರ್ ರಫೆಲ್ ನಡಾಲ್ ಸೆಮಿಫೈನಲ್‌ಗೆ ತಲುಪಿದರೆ, ಭಾರತಕ್ಕೆ ಡೇವಿಸ್ ಕಪ್ ಪಂದ್ಯ ಆಡಲು ಬರುವ ಸಾಧ್ಯತೆಯಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News