×
Ad

ವಿಂಡೀಸ್‌ ವಿರುದ್ಧ ಭಾರತಕ್ಕೆ ವೀರೋಚಿತ ಸೋಲು

Update: 2016-08-27 23:20 IST


ಪೋರ್ಟ್ ಲಾಡ್ರೆಡಲ್ , ಆ.27: ಅಮೆರಿಕದಲ್ಲಿ ಇಂದು ನಡೆದ ಮೊದಲ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ 1 ರನ್ ಅಂತರದಲ್ಲಿ ಸೋಲು ಅನುಭವಿಸಿದೆ. ಗೆಲುವಿಗೆ 246 ರನ್‌ಗಳ ಕಠಿಣ ಸವಾಲನ್ನು ಪಡೆದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 244 ರನ್ ಗಳಿಸಿತು.
  ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಎರಡು ರನ್ ಬೇಕಾಗಿತ್ತು. ಆದರೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಡರೆನ್ ಬ್ರಾವೊ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಕೈ ಸುಟ್ಟುಕೊಂಡರು.ಸ್ಯಾಮುಯೆಲ್ಸ್ ಕ್ಯಾಚ್ ತೆಗೆದುಕೊಳ್ಳುವುದರೊಂದಿಗೆ ಧೋನಿ ಔಟಾದರು. ಭಾರತ ಗೆಲುವಿನ ದಡದಲ್ಲಿ ಎಡವಿತು. ಧೋನಿ ಮತ್ತು ರಾಹುಲ್ ನಾಲ್ಕನೆ ವಿಕೆಟ್‌ಗೆ 104 ರನ್ ಸೇರಿಸಿದರು.
  ರಾಹುಲ್ ಔಟಾಗದೆ 110ರನ್ (84ನಿ, 51ಎ, 12ಬೌ,5ಸಿ) ಮತ್ತು ನಾಯಕ ಧೋನಿ 43 ರನ್ (54ನಿ, 25ಎ, 2ಬೌ,2ಸಿ) ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
 ಲೋಕೇಶ್ ರಾಹುಲ್ 46 ಎಸೆತಗಳಲ್ಲಿ 11 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಲ್ಲಿ ಶತಕ ದಾಖಲಿಸಿದರು. ಇದು ಅವರ ಚೊಚ್ಚಲ ಶತಕವಾಗಿದೆ. 4ನೆ ಪಂದ್ಯದಲ್ಲಿ ಶತಕ ದಾಖಲಿಸಿದ್ದಾರೆ.
ರೋಹಿತ್ ಶರ್ಮ 62 ರನ್ (28ಎ, 4ಬೌ,4ಸಿ), ವಿರಾಟ್ ಕೊಹ್ಲಿ 16 ರನ್(9ಎ, 3ಬೌ) ಗಳಿಸಿದರು.
   ವಿಂಡೀಸ್ 245/6: ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಎವಿನ್ ಲೂವಿಸ್ ಬಾರಿಸಿದ ಆಕರ್ಷಕ ಶತಕದ ನೆರವಿನಲ್ಲಿ ಭಾರತದ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 245 ರನ್ ಗಳಿಸಿತ್ತು.
 ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್‌ಇಂಡೀಸ್ ತಂಡಕ್ಕೆ ಆರಂಭಿಕ ದಾಂಡಿಗರಾದ ಚಾರ್ಲ್ಸ್ ಜಾನ್ಸನ್ ಮತ್ತು ಎವಿನ್ ಲೂಯಿಸ್ ಮೊದಲ ವಿಕೆಟ್‌ಗೆ 9.3 ಓವರ್‌ಗಳಲ್ಲಿ 126 ರನ್ ದಾಖಲಿಸಿದರು.
ಇವರ ಸ್ಫೋಟಕ ಬ್ಯಾಟಿಂಗ್‌ನಿಂದ ವಿಂಡೀಸ್ ಮೊದಲ ಆರು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 78 ರನ್ ಗಳಿಸಿತ್ತು. ಕೇವಲ 25 ಎಸೆತಗಳಲ್ಲಿ ತಂಡದ ಸ್ಕೋರ್ 50ಕ್ಕೆ ತಲುಪಿತ್ತು.
ಲೂವಿಸ್ ಅವರು 48 ಎಸೆತಗಳಲ್ಲಿ 5 ಬೌಂಡರಿ ಮತ್ತು 9 ಸಿಕ್ಸರ್ ನೆರವಿನಿಂದ ಶತಕ ದಾಖಲಿಸಿದ್ದರು. ಇದಕ್ಕೂ ಮೊದಲು ಅವರು 25 ಎಸೆತಗಳಲ್ಲಿ ಅರ್ಧಶತಕ(4 ಬೌಂಡರಿ ಮತ್ತು 3 ಸಿಕ್ಸರ್) ಗಳಿಸಿದ್ದರು.
ಇವರಿಗೆ ಸಾಥ್ ನೀಡಿದ್ದ ಜಾನ್ಸನ್ ಚಾರ್ಲ್ಸ್ 20 ಎಸೆತಗಳಲ್ಲಿ ಅರ್ಧಶತಕ(5ಬೌ,4ಸಿ) ಗಳಿಸಿದರು. ಅಂತಿಮವಾಗಿ ಅವರು 79 ರನ್(33ಎ, 6ಬೌ,7ಸಿ) ಗಳಿಸಿ ಔಟಾದರು.ಲೂಯಿಸ್ 49 ಎಸೆತಗಳಲ್ಲಿ 5 ಬೌಂಡರಿ ಮತ್ತು 9 ಸಿಕ್ಸರ್ ನೆರವಿನಲ್ಲಿ 100 ರನ್ ಗಳಿಸಿ ಔಟಾದರು.
ರಸೆಲ್ 22ರನ್, ಪೊಲಾರ್ಡ್ 22ರನ್, ಬ್ರಾಥ್‌ವೈಟ್ 14 ರನ್ ಗಳಿಸಿ ತಂಡದ ಸ್ಕೋರ್ 245ಕ್ಕೆ ಏರಿಸಲು ನೆರವಾದರು.

ಭಾರತದ ಪರ ಬುಮ್ರಾ 47ಕ್ಕೆ 2, ಜಡೇಜಾ 39ಕ್ಕೆ 2, ಶಮಿ 48ಕ್ಕೆ 1 ವಿಕೆಟ್ ಪಡೆದರು.

,,,,,,
ಸ್ಕೋರ್ ಪಟ್ಟಿ
ವೆಸ್ಟ್‌ಇಂಡೀಸ್ 20 ಓವರ್‌ಗಳಲ್ಲಿ 245/6
ಜಾನ್ಸನ್ ಚಾರ್ಲ್ಸ್ ಬಿ ಶಮಿ079
ಎವಿನ್ ಲೂವಿಸ್ ಸಿ ಅಶ್ವಿನ್ ಬಿ ಜಡೇಜ100
 ಆ್ಯಂಡ್ರೆ ರಸೆಲ್ ಎಲ್‌ಬಿಡಬ್ಲು ಬಿ ಜಡೇಜ 022
 ಕೆ. ಪೊಲಾರ್ಡ್ ಬಿ ಬುಮ್ರಾ022
  ಬ್ರಾಥ್‌ವೈಟ್ ರನೌಟ್(ಬುಮ್ರಾ)014
ಡರೆನ್ ಬ್ರಾವೊ ಔಟಾಗದೆ001
ಲೆಂಡ್ಲ್ ಸಿಮೊನ್ಸ್ ಬಿ ಬುಮ್ರಾ000
  ಸ್ಯಾಮುಯೆಲ್ಸ್ ಔಟಾಗದೆ001
  ಇತರೆ006
ವಿಕೆಟ್ ಪತನ: 1-126, 2-204, 3-205, 4-236, 5-244, 6-244
ಬೌಲಿಂಗ್ ವಿವರ
  ಮಹಮ್ಮದ್ ಶಮಿ4-0-48-1
 ಬಿ.ಕುಮಾರ್4-0-43-0
 ಬುಮ್ರಾ4-0-47-2
ಅಶ್ವಿನ್4-0-36-0
 ಜಡೇಜ3-0-39-2
ಬಿನ್ನಿ1-0-32-0
ಭಾರತ 20 ಓವರ್‌ಗಳಲ್ಲಿ 244/4
 ರೋಹಿತ್ ಶರ್ಮ ಸಿ ಚಾರ್ಲ್ಸ್ ಬಿ ಪೊಲಾರ್ಡ್ 062
 ರಹಾನೆ ಸಿ ಬ್ರಾವೊ ಬಿ ರಸೆಲ್007
ಕೊಹ್ಲಿ ಸಿ ಪ್ಲೆಚೆರ್ ಬಿ ಬ್ರಾವೊ 016
  ರಾಹುಲ್ ಔಟಾಗದೆ110
ಧೋನಿ ಸಿ ಸ್ಯಾಮುಯೆಲ್ಸ್ ಬಿ ಬ್ರಾವೊ 043
                    ಇತರೆ006
ವಿಕೆಟ್‌ಪತನ: 1-31, 2-48,3-137, 4-244
ಬೌಲಿಂಗ್ ವಿವರ
 ರಸೆಲ್ 4-0-53-1
  ಬದ್ರಿ 2-0-25-0
  ಬ್ರಾವೊ 4-0-37-2
 ನರೇನ್3-0-50-0
 ಬ್ರಾಥ್‌ವೈಟ್4-0-47-0
ಪೊಲಾರ್ಡ್3-0-30-1
            


  

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News