ಒಲಿಂಪಿಕ್ಸ್ ಚಾಂಪಿಯನ್ ಸಾಕ್ಷಿ ಮಲಿಕ್ ಗೆ ಕಂಕಣ ಭಾಗ್ಯ

Update: 2016-08-28 13:00 GMT

ರೋಹ್ಟಕ್,ಆ.27: ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದು ದೇಶಕ್ಕೆ ಹೆಮ್ಮೆಯನ್ನು ತಂದಿರುವ ಕುಸ್ತಿಪಟು ಸಾಕ್ಷಿ ಮಲಿಕ್ ಶೀಘ್ರವೇ ಹಸೆಮಣೆಯನ್ನೇರಲಿದ್ದಾರೆ. ಹರ್ಯಾಣದ 23ರ ಹರೆಯದ ಕುವರಿ ಈ ವಿಷಯವನ್ನು ಶುಕ್ರವಾರ ಪ್ರಕಟಿಸಿದ್ದಾರೆ.

ಅಂದ ಹಾಗೆ ತನ್ನ ಭಾವೀಪತಿಯ ಹೆಸರನ್ನು ಸಾಕ್ಷಿ ಗುಟ್ಟಾಗಿಯೇ ಇಟ್ಟಿದ್ದಾರೆ. ‘‘ಅವರು ನನಗೆ ಬೆಂಬಲವಾಗಿದ್ದಾರೆ,ನನ್ನ ಕನಸುಗಳನ್ನು ತನ್ನದೆಂದೇ ಭಾವಿಸುತ್ತಾರೆ. ಮದುವೆಯ ಬಳಿಕ ನನ್ನ ಸಿದ್ಧತೆಗಳಿಗೆ ನೆರವಾಗುವ ಒಳ್ಳೆಯ ಸ್ನೇಹಿತನನ್ನೂ ಅವರಲ್ಲಿ ನಾನು ಪಡೆಯಲಿದ್ದೇನೆ. ಮದುವೆ ನನ್ನ ವೃತ್ತಿಜೀವನಕ್ಕೆ ಯಾವುದೇ ಅಡ್ಡಿಯನ್ನುಂಟು ಮಾಡುವುದಿಲ್ಲ ಎಂದು ನಾನು ನಂಬಿದ್ದೇನೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News