×
Ad

ಎರಡನೆ ಪಂದ್ಯಮಳೆಗಾಹುತಿ; ವಿಂಡೀಸ್‌ಗೆ ಸರಣಿ ಜಯ

Update: 2016-08-29 00:28 IST

 ಲಾಡೆರ್‌ಹಿಲ್, ಆ.28: ಅಮೆರಿಕದಲ್ಲಿ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಕೇವಲ 1 ರನ್‌ನಿಂದ ಸೋಲು ಅನುಭವಿಸಿದ ಭಾರತ ತಂಡಕ್ಕೆ ಅದೃಷ್ಟ ಕೈಕೊಟ್ಟಿದ್ದು, ಎರಡನೆ ಪಂದ್ಯ ಮಳೆಯಿಂದಾಗಿ ರದ್ಧಾಗಿದೆ. ಇದರಿಂದ ವೆಸ್ಟ್‌ಇಂಡೀಸ್ ತಂಡ 1-0 ಅಂತರದಲ್ಲಿ ಸರಣಿ ಗೆಲುವು ದಾಖಲಿಸಿದೆ.

ಗೆಲವಿಗೆ 144 ರನ್‌ಗಳ ಸವಾಲನ್ನು ಪಡೆದಿರುವ ಭಾರತ 2 ಓವರ್‌ಗಳಲ್ಲಿ 15 ರನ್ ಗಳಿಸುವ ಹೊತ್ತಿಗೆ ಮಳೆಯ ಆಗಮನವಾಗಿ ಆಟ ಸ್ಥಗಿತಗೊಂಡಿದೆ. 10 ರನ್ ಗಳಿಸಿರುವ ಆರಂಭಿಕ ದಾಂಡಿಗ ರೋಹಿತ್ ಶರ್ಮ ಮತ್ತು 4 ರನ್ ಗಳಿಸಿರುವ ಅಜಿಂಕ್ಯ ರಹಾನೆ ಔಟಾಗದೆ ಕ್ರೀಸ್‌ನಲ್ಲಿ ಬಳಿಕ ಆಟ ಆರಂಭಗೊಳ್ಳಲಿಲ್ಲ.
ಟಾಸ್ ಜಯಿಸಿ ವೆಸ್ಟ್‌ಇಂಡೀಸ್‌ನ್ನು ಬ್ಯಾಟಿಂಗ್‌ಗೆ ಇಳಿಸಿದ ಭಾರತ ತಂಡ ವಿಂಡೀಸ್‌ನ್ನು 19.4 ಓವರ್‌ಗಳಲ್ಲಿ 143 ರನ್‌ಗಳಿಗೆ ಆಲೌಟ್ ಮಾಡಿತ್ತು.
ಮೊದಲ ಪಂದ್ಯದಲ್ಲಿ ವೇಗದ ಶತಕ ದಾಖಲಿಸಿದ್ದ ಆರಂಭಿಕ ದಾಂಡಿಗ ಎವಿನ್ ಲೂವಿಸ್ (7) ಅವರನ್ನು ವೇಗದ ಬೌಲರ್ ಮುಹಮ್ಮದ್ ಶಮಿ ಬೇಗನೆ ಪೆವಿಲಿಯನ್‌ಗೆ ಅಟ್ಟಿ ಭಾರತಕ್ಕೆ ಮೊದಲ ಯಶಸ್ಸು ತಂದು ಕೊಟ್ಟರು. ಲೂವಿಸ್‌ಗೆ ದೊಡ್ಡ ಇನಿಂಗ್ಸ್ ಕಟ್ಟಲು ಸಾಥ್ ನೀಡಿ ಅರ್ಧಶತಕ ದಾಖಲಿಸಿದ್ದ ಜಾನ್ಸನ್ ಚಾರ್ಲ್ಸ್ (43) ಅವರಿಗೆ ಅಮಿತ್ ಮಿಶ್ರಾ ಅರ್ಧಶತಕ ದಾಖಲಿಸಲು ಅವಕಾಶ ನೀಡಲಿಲ್ಲ.
 ಅಮಿತ್ ಮಿಶ್ರಾ (24ಕ್ಕೆ 3), ಮುಹಮ್ಮದ ಶಮಿ(31ಕ್ಕೆ 2), ರವಿಚಂದ್ರನ್ ಅಶ್ವಿನ್(11ಕ್ಕೆ 2), ಜಸ್‌ಪ್ರೀತ್ ಬುಮ್ರಾ (26ಕ್ಕೆ 2) , ಮತ್ತು ಭುವನೇಶ್ವರ ಕುಮಾರ್ ದಾಳಿಗೆ ಸಿಲುಕಿ ಬೇಗನೆ ಇನಿಂಗ್ಸ್ ಮುಗಿಸಿತು.
 ಚಾರ್ಲ್ಸ್ 43 ರನ್ ಗಳಿಸಿರುವುದು ತಂಡದ ಪರ ದಾಖಲಾಗಿರುವ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಲೆಂಡ್ಲ್ ಸಿಮೊನ್ಸ್(19), ಕೀರನ್ ಪೊಲಾರ್ಡ್(13), ಆಂಡ್ರೆ ರಸೆಲ್(13),ನಾಯಕ ಬ್ರಾಥ್‌ವೈಟ್(18) ರನ್ ಗಳಿಸಿದರು. ವಿಂಡೀಸ್ ಪವರ್‌ಪ್ಲೇಯಲ್ಲಿ 6 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 54 ರನ್ ಗಳಿಸಿತ್ತು .6ನೆ ಓವರ್‌ನ ಮೊದಲ ಎಸೆತದಲ್ಲಿ ಚಾರ್ಲ್ಸ್ ಅವರು ಅಮಿತ್ ಮಿಶ್ರಾ ಎಸೆತದಲ್ಲಿ ಅಜಿಂಕ್ಯ ರಹಾನೆಗೆ ಕ್ಯಾಚ್ ನೀಡಿದರು. ಇದರೊಂದಿಗೆ ಚಾರ್ಲ್ಸ್ 25 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 43 ರನ್ ಗಳಿಸಿದರು. ಅರ್ಧ ಶತಕ ಸಾಧ್ಯವಾಗಲಿಲ್ಲ. ಅವರನ್ನು ಹೊರತುಪಡಿಸಿದರೆ ಮಿಂಚಲಿಲ್ಲ.
ಸ್ಕೋರ್ ಪಟ್ಟಿ
ವೆಸ್ಟ್‌ಇಂಡೀಸ್ 19.4 ಓವರ್‌ಗಳಲ್ಲಿ ಆಲೌಟ್ 143
        ಚಾರ್ಲ್ಸ್ ಸಿ ರಹಾನೆ ಬಿ ಮಿಶ್ರಾ43
        ಲೂವಿಸ್ ಸಿ ಮಿಶ್ರಾ ಬಿ ಶಮಿ07
    ಸಾಮುಯೆಲ್ಸ್ ಸಿ ಧೋನಿ ಬಿ ಬುಮ್ರಾ05
        ಸಿಮೊನ್ಸ್ ಸ್ಟಂ.ಧೋನಿ ಬಿ ಅಶ್ವಿನ್19
            ಫ್ಲೆಚೆರ್ ಬಿ ಬುಮ್ರಾ03
    ಪೊಲಾರ್ಡ್ ಎಲ್‌ಬಿಡಬ್ಲು ಬಿ ಅಶ್ವಿನ್13
        ರಸೆಲ್ ಸಿ ಕೊಹ್ಲಿ ಬಿ ಕುಮಾರ್ 13
            ಬ್ರಾವೊ ಬಿ ಮಿಶ್ರಾ03
        ಬ್ರಾಥ್‌ವೈಟ್ ಬಿ ಮಿಶ್ರಾ18
            ನರೇನ್ ಔಟಾಗದೆ09
            ಬದ್ರಿ ಬಿ ಶಮಿ01
                ಇತರ09
ವಿಕೆಟ್ ಪತನ: 1-24, 2-50, 3-76, 4-76, 5-92, 6-98, 7-111, 8-123, 9-133, 10-143
ಬೌಲಿಂಗ್ ವಿವರ
        ಬಿ. ಕುಮಾರ್4.0-0-36-1
            ಎಂ.ಶಮಿ2.4-0-31-2
            ಎ.ಮಿಶ್ರಾ4.0-0-24-3
            ಜಡೇಜ2.0-0-11-0
            ಅಶ್ವಿನ್3.0-0-11-2
            ಬುಮ್ರಾ4.0-0-26-2

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News