×
Ad

ಯುಎಸ್ ಓಪನ್;ಕಠಿಣ ಹೋರಾಟ ನೀಡಿದ ಸಾಕೇತ್ ಮೈನೇನಿ ಹೊರಕ್ಕೆ

Update: 2016-08-30 22:30 IST

ನ್ಯೂಯಾರ್ಕ್, ಆ.30: ಮೊದಲ ಬಾರಿ ಯುಎಸ್ ಓಪನ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ಭಾರತದ ಯುವ ಟೆನಿಸ್ ತಾರೆ ಸಾಕೇತ್ ಮೈನೇನಿ ಅವರು ಇಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಕಠಿಣ ಹೋರಾಟ ನೀಡಿದ್ದರೂ, ಎರಡನೆ ಸುತ್ತು ತಲುಪುವಲ್ಲಿ ಎಡವಿದ್ದಾರೆ.
 143ನೆ ಶ್ರೇಯಾಂಕದ ಆಟಗಾರ ಮೈನೇನಿ ಅವರು ವಿಶ್ವದ ನಂ.4ನೆ ಆಟಗಾರ ಜಿರಿ ವೆಸೆಲೈ ವಿರುದ್ಧ 6-7(5), 6-4, 6-2, 2-6, 5-7 ಅಂತರದಲ್ಲಿ ಸೋತು ನಿರ್ಗಮಿಸಿದರು.

ಮೂರು ಗಂಟೆ ಮತ್ತು 47 ನಿಮಿಷಗಳ ಕಾಲ ನಡೆದ ಮ್ಯಾರಥಾನ್ ಹಣಾಹಣಿಯಲ್ಲಿ ಸಾಕೇತ್ ಕಠಿಣ ಹೋರಾಟ ನೀಡಿದರು. ಇದರೊಂದಿಗೆ ಮೊದಲ ಬಾರಿ ಗ್ರಾನ್ ಸ್ಲಾಮ್ ಸಿಂಗಲ್ಸ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ಸಾಕೇತ್ ಅವರು ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದಾರೆ. ಸಾಕೇತ್ ಮೈನೇನಿ ಅವರಿಗೆ ಫಿಟ್‌ನೆಸ್ ಸಮಸ್ಯೆಯು ಸೋಲಿಗೆ ಕಾರಣವಾಯಿತು.

   ಸಾಕೇತ್ ಒಂದು ವೇಳೆ ಗೆಲುವು ಸಾಧಿಸಿದ್ದರೆ ಎರಡನೆ ಸುತ್ತಿನಲ್ಲಿ ವಿಶ್ವದ ನಂ.1 ಆಟಗಾರ ಜೊಕೊವಿಕ್ ವಿರುದ್ಧ ಆಡುವ ಅರ್ಹತೆ ಪಡೆಯುತ್ತಿದ್ದರು. ಸಾಕೇತ್ ಮೊದಲ ಸುತ್ತಿನ ಪಂದ್ಯದಲ್ಲಿ ಎರಡು ಬಾರಿ ಮೇಲುಗೈ ಸಾಧಿಸಿದ್ದರು. ಜೆಕ್ ಗಣರಾಜ್ಯದ ಜಿರಿ ವಿರುದ್ಧ ಮೊದಲ ಸೆಟ್‌ನಲ್ಲಿ ಸಾಕೇತ್ ಕಠಿಣ ಹೋರಾಟ ನಡೆಸಿದರು. ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ ಸಾಕೇತ್ ಎರಡನೆ ಸೆಟ್‌ನಲ್ಲಿ ತಿರುಗೇಟು ನೀಡಿದರು. ಆದರೆ ಮೂರನೆ ಸೆಟ್‌ನಲ್ಲ್ಲೂ ಮೇಲುಗೈ ಸಾಧಿಸಿದರು. ಆದರೆ ನಾಲ್ಕು ಮತ್ತು ಐದನೆ ಸೆಟ್‌ನಲ್ಲಿ ಸೋಲುವುದರೊಂದಿಗೆ ಸಾಕೇತ್ ವರ ಅಭಿಯಾನ ಕೊನೆಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News