ಶ್ರೀಲಂಕಾ ವಿರುದ್ಧ ಸರಣಿ ಜಯಿಸಿದ ಆಸ್ಟ್ರೇಲಿಯ

Update: 2016-08-31 18:21 GMT

ಡಂಬುಲಾ, ಆ.31: ಇಲ್ಲಿ ನಡೆದ ನಾಲ್ಕನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯ 6 ವಿಕೆಟ್‌ಗಳ ಜಯ ಗಳಿಸಿದೆ.
ಗೆಲುವಿಗೆ 213 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯ ತಂಡ 31 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 217 ಗಳಿಸಿತು. ಇದರೊಂದಿಗೆ ಐದು ಪಂದ್ಯಗಳ ಏಕದಿನ ಸರಣಿಯನ್ನು ಆಸ್ಟ್ರೇಲಿಯ 3-1 ಅಂತರದಲ್ಲಿ ವಶಪಡಿಸಿಕೊಂಡಿದೆ.
ಆಸ್ಟ್ರೇಲಿಯ ತಂಡದ ಜಾರ್ಜ್ ಬೈಲಿ ಔಟಾಗದೆ 90 ರನ್, ಆ್ಯರೊನ್ ಫಿಂಚ್ 55 ರನ್, ಹೆಡ್ 40 ರನ್, ವಾರ್ನರ್ 19 ರನ್ ಗಳಿಸಿದ್ದರು. ಬೈಲಿ 21ನೆ ಅರ್ಧಶತಕ ದಾಖಲಿಸಿದ್ದರು.
 ಇದಕ್ಕೂ ಮೊದಲು ಟಾಸ್ ಜಯಿಸಿ ಶ್ರೀಲಂಕಾ ತಂಡ ಬ್ಯಾಟಿಂಗ್ ಆಯ್ದುಕೊಂಡಿತ್ತು. ನಿಗದಿತ 50 ಓವರ್‌ಗಳಲ್ಲಿ 212 ರನ್ ಗಳಿಸಿತ್ತು. ಜಾನ್ ಹೆಸ್ಟಿಂಗ್ಸ್ 45ಕ್ಕೆ 6 ವಿಕೆಟ್ ಉಡಾಯಿಸಿ ಲಂಕಾ ಬ್ಯಾಟಿಂಗ್‌ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ್ದರು.ಹೆಸ್ಟಿಂಗ್ ಜೀವನ ಶ್ರೇಷ್ಠ ಪ್ರದರ್ಶನ ನೀಡಿದ್ದರು.
ಶ್ರೀಲಂಕಾದ ಆರಂಭಿಕ ದಾಂಡಿಗ ಧನಂಜಯ ಡಿ ಸಿಲ್ವ 76 ರನ್,ಆ್ಯಂಜೆಲೊ ಮ್ಯಾಥ್ಯೂಸ್ 40 ರನ್, ತಿಸ್ಸರಾ ಪೆರರಾ 13 ರನ್, ಪಾಥಿರಣ 24 ರನ್ ಮತ್ತು ಪೆರೆರಾ 18 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ
ಶ್ರೀಲಂಕಾ 50 ಓವರ್‌ಗಳಲ್ಲಿ ಆಲೌಟ್ 212(ಡಿ ಸಿಲ್ವ 76, ಮ್ಯಾಥ್ಯೂಸ್ 40; ಹೆಸ್ಟಿಂಗ್ಸ್ 45ಕ್ಕೆ 6).
ಆಸ್ಟ್ರೇಲಿಯ 31 ಓವರ್‌ಗಳಲ್ಲಿ 217/4( ಬೈಲಿ ಔಟಾಗದೆ 90, ಫಿಂಚ್ 55, ಹೆಡ್ 40; ಪಾಥಿರಣ 37ಕ್ಕೆ 3).
ಪಂದ್ಯಶ್ರೇಷ್ಠ: ಹೆಸ್ಟಿಂಗ್ಸ್


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News