×
Ad

ಟೆಸ್ಟ್ ರ‍್ಯಾಂಕಿಂಗ್ :ರವಿಚಂದ್ರನ್ ಅಶ್ವಿನ್ ನಂ.3ನೆ ಸ್ಥಾನ, ರಹಾನೆ 5ನೆ ಸ್ಥಾನ

Update: 2016-08-31 23:56 IST

ದುಬೈ, ಆ.31: ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಐಸಿಸಿ ಟೆಸ್ಟ್ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ 3ನೆ ಸ್ಥಾನಕ್ಕೆ ಹಿಂಭಡ್ತಿ ಪಡೆದಿದ್ದಾರೆ. ಆದರೆ ಭಾರತದ ಭಾರತದ ಬೌಲರ್‌ಗಳ ಪೈಕಿ ಅಗ್ರಸ್ಥಾನದಲ್ಲಿದ್ದಾರೆ.

ಬುಧವಾರ ಬಿಡುಗಡೆಗೊಂಡಿರುವ ಟೆಸ್ಟ್ ಆಟಗಾರರ ರ‍್ಯಾಂಕಿಂಗ್‌ನಲ್ಲಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ 8ನೆ ಸ್ಥಾನ ಕಾಯ್ದುಕೊಂಡಿದ್ದಾರೆ. ರಹಾನೆ ಭಾರತದ ಪರ ಅಗ್ರ 10 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ.
 ರವೀಂದ್ರ ಜಡೇಜ 8ನೆ ಸ್ಥಾನದೊಂದಿಗೆ ಅಗ್ರ 10 ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್‌ಗೆ ಸಾಥ್ ನೀಡಿದ್ದಾರೆ.
ದಕ್ಷಿಣ ಆಫ್ರಿಕದ ಡೇಲ್ ಸ್ಟೇಯ್ನಿ ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಮತ್ತೆ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಅವರು ಸೆಂಚೂರಿಯನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಅವರು ಎರಡನೆ ಇನಿಂಗ್ಸ್‌ನಲ್ಲಿ 33ಕ್ಕೆ 5 ವಿಕೆಟ್ ಪಡೆದಿದ್ದರು. 26ನೆ ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದರು.
99ಕ್ಕೆ 8 ವಿಕೆಟ್ ಪಡೆದು ನಂ.1 ಸ್ಥಾನಕ್ಕೆ ವಾಪಸಾಗಿದ್ದಾರೆ ಎಂದು ಐಸಿಸಿ ಪ್ರಕಟನೆ ತಿಳಿಸಿದೆ. 2014ರ ಫೆಬ್ರವರಿಯಲ್ಲಿ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ನಂ.1 ಸ್ಥಾನ ಪಡೆದಿದ್ದ ಸ್ಟೇಯ್ನಾ 2015 ಡಿಸೆಂಬರ್ ತನಕ ಈ ಸ್ಥಾನವನ್ನು ಕಾಯ್ದುಕೊಂಡಿದ್ದರು. ಭುಜ ನೋವಿನಿಂದಾಗಿ ಟೆಸ್ಟ್‌ನಿಂದ ಹೊರಗುಳಿದ ಸ್ಟೇಯ್ನ್ ನಂ.1 ಸ್ಥಾನ ಕಳೆದುಕೊಂಡಿದ್ದರು. ಸ್ಟೇಯ್ನಾ ಅನುಪಸ್ಥಿತಿಯಲ್ಲಿ ಅಶ್ವಿನ್ ಅತ್ಯುತ್ತಮ ಪ್ರದರ್ಶನ ನೀಡಿ ನಂ.1 ಸ್ಥಾನ ತಲುಪಿದ್ದರು. ದಕ್ಷಿಣ ಆಫ್ರಿಕದ ಟೆಸ್ಟ್ ಬ್ಯಾಟ್ಸ್‌ಮನ್ ಎಫ್ ಡು ಪ್ಲೆಸಿಸ್ 9 ಸ್ಥಾನಗಳ ಭಡ್ತಿ ಪಡೆದು 24ನೆ ಸ್ಥಾನ ತನ್ನದಾಗಿಸಿಕೊಂಡಿದ್ದಾರೆ.ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ಲಿಂಟನ್ ಡಿ ಕಾಕ್ 18ನೆ ಸ್ಥಾನ ಪಡೆದಿದ್ದಾರೆ.
ದಕ್ಷಿಣ ಆಫ್ರಿಕ ಸರಣಿಯಲ್ಲಿ 1-0 ಗೆಲುವಿನೊಂದಿಗೆ ಟೆಸ್ಟ್  ರ‍್ಯಾಂಕಿಂಗ್‌ನಲ್ಲಿ  ಐದನೆ ಸ್ಥಾನ , ನ್ಯೂಝಿಲೆಂಡ್ 7ನೆ ಸ್ಥಾನ ಪಡೆದಿದೆ. ಪಾಕಿಸ್ತಾನ ನಂ.1 ಮತ್ತು ಭಾರತ ನಂ.2 ಸ್ಥಾನ ಹಂಚಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News