×
Ad

ಎಬಿಡಿ ಪ್ರಕಾರ 2015 ರ ವಿಶ್ವಕಪ್ ಸೆಮಿಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ಸೋಲಲು ಕಾರಣ ಇದು !

Update: 2016-09-01 21:04 IST

ಜೋಹಾನ್ಸ್ ಬರ್ಗ್ , ಸೆ.1 : 2015  ರ ವಿಶ್ವಕಪ್ ಸೆಮಿ ಫೈನಲ್ ನಲ್ಲಿ ನ್ಯೂಝೀಲ್ಯಾನ್ಡ್ ವಿರುದ್ಧದ ಸೋಲು ತಮ್ಮ ಕ್ರಿಕೆಟ್ ಜೀವನದ ಅತ್ಯಂತ ದೊಡ್ಡ ನಿರಾಶೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ  ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. 

ತಮ್ಮ ಆತ್ಮಕತೆ ' ಎಬಿ : ದಿ ಅಟೋಬಯೋಗ್ರಫಿ' ಯಲ್ಲಿ ಈ ಬಗ್ಗೆ ಹೇಳಿರುವ ಅವರು ಇದಕ್ಕೆ ತಂಡದಲ್ಲಿ ಇರುವ ಅಲಿಖಿತ ಕೋಟಾ ಪದ್ಧತಿ ಕಾರಣ ಎಂದು ಹೇಳಿದ್ದಾರೆ. ಈ ನಿಯಮದ ಪ್ರಕಾರ ದಕ್ಷಿಣ ಆಫ್ರಿಕಾ ತಂಡದಲ್ಲಿ ಕರಿಯ ಆಟಗಾರರಿಗೆ ಸಾಕಷ್ಟು ಪ್ರಾತಿನಿಧ್ಯ ನೀಡುವುದು ಕಡ್ಡಾಯ.  

ವಿಶ್ವ ಕಪ್ ಕ್ವಾರ್ಟರ್ ಫೈನಲ್ ನಲ್ಲಿ ಶ್ರೀಲಂಕಾವನ್ನು ಸೋಲಿಸಿದ ದಕ್ಷಿಣ ಆಫ್ರಿಕಾ ತಂಡದಲ್ಲಿ ವೆರ್ನನ್ ಫಿಲ್ಯಾಂಡರ್ ಇರಲಿಲ್ಲ. ಅವರು ಗಾಯದ ಸಮಸ್ಯೆಯಿಂದ ಹೊರಗಿದ್ದರು. ಅವರ ಬದಲು ಆಡಿದ ಕೈಲ್ ಅಬಾಟ್ ಉತ್ತಮ ಪ್ರದರ್ಶನ ನೀಡಿದರು. ಹಾಗಾಗಿ ಮುಂದಿನ ಸೆಮಿ ಫೈನಲ್ ನಲ್ಲಿ ತಂದದಲ್ಲಿ ಯಾವುದೇ ಬದಲಾವಣೆ ಆಗದು ಎಂಬುದು ಡಿವಿಲಿಯರ್ಸ್ ಅಂದಾಜಿಸಿದ್ದರು.

ಆದರೆ ಸೆಮಿ ಫೈನಲ್ ಹಿಂದಿನ ದಿನ ಡಿವಿಲಿಯರ್ಸ್ ಗೆ ಕರೆ ಮಾಡಿದ ವ್ಯಕ್ತಿ ಫಿಲ್ಯಾಂಡರ್ ದೈಹಿಕ ಪರೀಕ್ಷೆ ಪಾಸ್ ಮಾಡಿದ್ದು ಅವರು ಮರುದಿನ ಅಬಾಟ್ ಬದಲು ಆಡಲಿದ್ದಾರೆ ಎಂದು ಹೇಳಿದರು. ಈ ಕರೆ ಮಾಡಿದ ವ್ಯಕ್ತಿ ಯಾರು ಎಂದು ಡಿವಿಲಿಯರ್ಸ್ ಬಹಿರಂಗ ಪಡಿಸಿಲ್ಲ. ಈ ಕರೆಯ ಹಿಂದೆ ಕೇವಲ ಕೇವಲ ಕ್ರಿಕೆಟ್ ಕಾರಣ ಮಾತ್ರ ಇರಲಿಲ್ಲ ಎಂಬುದು ಡಿವಿಲಿಯರ್ಸ್ ವಾದ. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News