ಕ್ರಿಕೆಟಿಗ ಸ್ಟುವರ್ಟ್ ಬಿನ್ನಿಯ ಬೆಂಬಲಕ್ಕೆ ನಿಂತ ಪತ್ನಿ ಮಯಾಂತಿ
ಹೊಸದಿಲ್ಲಿ, ಸೆ.1: ಫ್ಲೋರಿಡಾದಲ್ಲಿ ನಡೆದ ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 32 ರನ್ ನೀಡಿ ದುಬಾರಿಯಾಗಿದ್ದ ಭಾರತದ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿಯ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಅಂತಾರಾಷ್ಟ್ರೀಯ ಖ್ಯಾತಿಯ ನಿರೂಪಕಿ ಮಯಾಂತಿ ಲ್ಯಾಂಗರ್ ಪತಿ ಬಿನ್ನಿಯ ಬೆಂಬಲಕ್ಕೆ ನಿಂತಿದ್ದಾರೆ. ಟೀಕಾಕಾರರಿಗೆ ಟ್ವಿಟ್ಟರ್‌ನಲ್ಲಿ ಪ್ರತ್ಯುತ್ತರ ನೀಡಿದ್ದಾರೆ.
‘‘ನನ್ನನ್ನು ಸುಸೈಡ್ ಪದದಿಂದ ರೇಗಿಸುವುದು ನಾಚಿಕೆಗೇಡಿನ ವಿಷಯ. ಸುಸೈಡ್‌ನಂತಹ ದುರ್ಘಟನೆಯಿಂದ ಕುಟುಂಬಗಳು ಹೇಗೆ ಹಿಂಸೆ ಅನುಭವಿಸುತ್ತವೆ ಎಂಬುದನ್ನು ಯೋಚಿಸಬೇಕು’’ ಎಂದು ಮಯಾಂತಿ ಟೀಟ್ಟಿಸಿದ್ದಾರೆ.
ಮಾಜಿ ಆಯ್ಕೆಗಾರ ರೋಜರ್ ಬಿನ್ನಿ ಪುತ್ರ ಸ್ಟುವರ್ಟ್ ಬಿನ್ನಿ ಏಕದಿನದಲ್ಲಿ ಶ್ರೇಷ್ಠ ಬೌಲಿಂಗ್ ಮಾಡಿದ ದಾಖಲೆ ಹೊಂದಿದ್ದಾರೆ. 2014ರಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 4 ರನ್‌ಗೆ 6 ವಿಕೆಟ್ ಉರುಳಿಸಿದ್ದರು. ಬಿನ್ನಿ 2012ರಲ್ಲಿ ಮಯಾಂತಿ ಲ್ಯಾಂಗರ್‌ರನ್ನು ವಿವಾಹವಾಗಿದ್ದರು.