ಜರ್ಮನಿಗೆ ನೆಯೆರ್ ನಾಯಕ
Update: 2016-09-01 23:24 IST
ಬರ್ಲಿನ್, ಸೆ.1: ವಿಶ್ವ ಶ್ರೇಷ್ಠ ಗೋಲ್‌ಕೀಪರ್ ಮ್ಯಾನುಯೆಲ್ ನೆಯೆರ್ ವಿಶ್ವ ಚಾಂಪಿಯನ್ ಜರ್ಮನಿ ಫುಟ್ಬಾಲ್ ತಂಡದ ನಾಯಕನಾಗಿ ಗುರುವಾರ ನೇಮಕಗೊಂಡಿದ್ದಾರೆ. ಬಾಸ್ಟಿಯನ್ ಶ್ವೆವೆನ್‌ಸ್ಟಿಗೆರ್ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ನೆಯೆರ್ ಆಯ್ಕೆಯಾಗಿದ್ದಾರೆ.
ರವಿವಾರ ಒಸ್ಲೊದಲ್ಲಿ ನಡೆಯಲಿರುವ ನಾರ್ವೆ ವಿರುದ್ಧದ 2018ರ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜರ್ಮನಿ ತಂಡವನ್ನು ನಾಯಕನಾಗಿ ಮುನ್ನಡೆಸುವರು.
ನೆಯೆರ್ 2016ರ ಯುರೋ ಕಪ್‌ನಲ್ಲಿ ಜರ್ಮನಿ ಆಡಿರುವ 6 ಪಂದ್ಯಗಳ ಪೈಕಿ 5ರಲ್ಲಿ ನಾಯಕನಾಗಿದ್ದರು. ಮಂಡಿನೋವಿನಿಂದ ಚೇತರಿಸಿಕೊಳ್ಳುತ್ತಿರುವ ನೆಯೆರ್ ಒಟ್ಟು 14 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಜರ್ಮನಿಯನ್ನು ಮುನ್ನಡೆಸಿದ ಅನುಭವವಿದೆ.