×
Ad

ಬಿಡುಗಡೆಗೆ ಮೊದಲೇ ಭಾರತದಲ್ಲಿ ಕುತೂಹಲ ಕೆರಳಿಸಿರುವ ಎಬಿಡಿ ಆತ್ಮಚರಿತ್ರೆ

Update: 2016-09-02 14:04 IST

 ಜೋಹಾನ್ಸ್‌ಬರ್ಗ್, ಸೆ.2: ದಕ್ಷಿಣ ಆಫ್ರಿಕದ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಆತ್ಮಚರಿತ್ರೆ ಪುಸ್ತಕ ಭಾರತದಲ್ಲಿ ಬಿಡುಗಡೆಯಾಗುವ ಮೊದಲೇ ಕುತೂಹಲ ಕೆರಳಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಿವಿಲಿಯರ್ಸ್ ಆತ್ಮಚರಿತ್ರೆ ಮುಂದಿನ ವಾರ ಭಾರತದಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಯುತ್ತಿದೆ.

ಗುರುವಾರ ರಾತ್ರಿ ದಕ್ಷಿಣ ಆಫ್ರಿಕದಲ್ಲಿ ಆತ್ಮಚರಿತ್ರೆ ಬಿಡುಗಡೆ ಮಾಡಿರುವ ವಿಲಿಯರ್ಸ್ ಬಳಿ ಈ ಬಗ್ಗೆ ಕೇಳಿದಾಗ ‘‘ನಾನು ಭಾರತದಲ್ಲಿ ಪ್ರತಿ ಬಾರಿ ಆಡುವಾಗಲೂ ಈ ರೀತಿಯ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದಿಲ್ಲ. 2015ರಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ವಿರುದ್ಧ ಅಂತಿಮ ಏಕದಿನ ಪಂದ್ಯ ಆಡಲು ಮೈದಾನಕ್ಕೆ ಇಳಿದ ಆ ಕ್ಷಣ ಅತ್ಯಂತ ಮಧುರವಾದ ಅನುಭವ ನೀಡುತ್ತಿದೆ. ನಾನು ಭಾರತದಲ್ಲಿ ಬ್ಯಾಟಿಂಗ್‌ಗೆ ತೆರಳಿದಾಗಲ್ಲೆಲ್ಲಾ ಅಲ್ಲಿನ ಪ್ರೇಕ್ಷಕರು ‘ಎಬಿ!ಎಬಿ! ಎಂದು ಕೂಗುತ್ತಾರೆ. ಇಡೀ ಸರಣಿಯಲ್ಲಿ ಇಂತಹ ವಾತಾವರಣ ಕಂಡುಬಂದಿತ್ತು. ಭಾರತದ ಜನತೆ ನನ್ನನ್ನು ಅವರ ದೇಶದವರೆಂತೆಯೇ ಕಾಣುತ್ತಿದ್ದರು. ಅವರದೇ ತಂಡದ ವಿರುದ್ಧ ಆಡಿದರೂ ನನ್ನ ಮೇಲೆ ಪ್ರೀತಿ ಕಡಿಮೆಯಾಗಿರಲಿಲ್ಲ’’ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ಭಾರತದಲ್ಲಿ ಡಿವಿಲಿಯರ್ಸ್ ಜನಪ್ರಿಯತೆಯನ್ನು ಗಮನಿಸಿರುವ ದಕ್ಷಿಣ ಆಫ್ರಿಕದ ಮಾಜಿ ಕ್ರಿಕೆಟಿಗ ಹಾಗೂ ಮುಂಬೈ ಇಂಡಿಯನ್ಸ್ ಸಲಹೆಗಾರ ಜಾಂಟಿ ರೋಡ್ಸ್, ‘‘ಭಾರತದ ಪ್ರೇಕ್ಷಕರು ಡಿವಿಲಿಯರ್ಸ್‌ರನ್ನು ಇಷ್ಟೊಂದು ಇಷ್ಟಪಟ್ಟಿದ್ದನ್ನು ನಾನು ಇದೇ ಮೊದಲು ನೋಡಿದ್ದೇನೆ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News