×
Ad

ಅರ್ನಬ್ ಗೋಸ್ವಾಮಿಯ ಶೋಗೆ ಬರಲು ನಿರಾಕರಿಸಿದ ವೀರೂ...

Update: 2016-09-03 18:46 IST

 ಹೊಸದಿಲ್ಲಿ, ಸೆ.3: ಟೀಮ್ ಇಂಡಿಯಾದ ಮಾಜಿ ಆರಂಭಿಕ ದಾಂಡಿಗ ವೀರೇಂದ್ರ ಸೆಹ್ವಾಗ್ ಸ್ಫೋಟಕ ಬ್ಯಾಟಿಂಗ್ ಮೂಲಕ ವಿಶ್ವದ ಖ್ಯಾತ ಬೌಲರ್‌ಗಳ ನಿದ್ದೆಗೆಡಿಸಿದವರು. ನಜಾಫ್‌ಗಡದ ನವಾಬ್ ಖ್ಯಾತಿಯ ಸೆಹ್ವಾಗ್ ವೃತ್ತಿ ಬದುಕಿನಲ್ಲಿ ಹಲವು ವಿಶ್ವ ದಾಖಲೆಗಳನ್ನು ಬರೆದವರು
  ಸೆಹ್ವಾಗ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿ ಹಲವು ವರ್ಷಗಳು ಕಳೆದಿದೆ. ಮಾಧ್ಯಮಗಳಿಂದ ದೂರ ಉಳಿದರೂ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ಭಾರತದ ಪ್ರತಿಯೊಂದು ಟಿವಿ ಚಾನಲ್‌ಗಳು ಅವರೊಂದಿಗೆ ಚರ್ಚೆಗೆ ಸಿದ್ಧವಾಗಿರುತ್ತದೆ.
  ಟೈಮ್ ನೌ ಚಾನಲ್‌ನ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ಚರ್ಚಾ ಕಾರ್ಯಕ್ರಮಕ್ಕೆ ವೀರೂಗೆ ಆಹ್ವಾನ ನೀಡಿದ್ದರು. ಆದರೆ ವೀರೂ ಅವರು ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದರು.
   ಈ ವಿಚಾರವನ್ನು ಟ್ವಿಟರ‍್ ನಲ್ಲಿ  ತಿಳಿಸಿರುವ ವೀರೇಂದ್ರ ಸೆಹ್ವಾಗ್ ಅವರು ‘‘ಅರ್ನಬ್ ಗೋಸ್ವಾಮಿ ಅವರು ನಾನು ಬ್ರಿಟಿಷ್ ಪತ್ರಕರ್ತ ಪಿಯರ್ಸ್  ಮಾರ್ಗನ್‌ ಬಗ್ಗೆ ಮಾತನಾಡಬೇಕೆಂದು ಬಯಸಿದ್ದರು. ಆದರೆ ಆ ಮನುಷ್ಯ ಯಾವುದೇ ಪ್ರಸಾರ ಸಮಯ ಪಡೆಯಲು ಅರ್ಹನಲ್ಲ. ಈ ಕಾರಣದಿಂದ ನಾನು ಅರ್ನಬ್ ಗೋಸ್ವಾಮಿ ಆಹ್ವಾನವನ್ನು ತಿರಸ್ಕರಿಸಿದೆ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News