×
Ad

ಎಐಟಿಎ ಗೌರವ ಆಜೀವ ಅಧ್ಯಕ್ಷರಾಗಿ ಅನಿಲ್ ಖನ್ನಾ ಆಯ್ಕೆ

Update: 2016-09-03 23:39 IST

ಇಂದೋರ್, ಸೆ.3: ಏಷ್ಯನ್ ಟೆನಿಸ್ ಫೆಡರೇಶನ್ ಅಧ್ಯಕ್ಷ ಹಾಗೂ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್‌ನ ಉಪಾಧ್ಯಕ್ಷ ಅನಿಲ್ ಖನ್ನಾ ಶನಿವಾರ ಅಖಿಲ ಭಾರತ ಟೆನಿಸ್ ಅಸೋಸಿಯೇಶನ್‌ನ(ಎಐಟಿಎ) ಗೌರವ ಆಜೀವ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

 ಎಐಟಿಎ ವಾರ್ಷಿಕ ಮಹಾ ಸಭೆ(ಎಜಿಎಂ)ಯಲ್ಲಿ ಮಾನ್ಯತೆ ಪಡೆದಿರುವ 23 ಘಟಕಗಳಿಂದ ಖನ್ನಾ ಹೆಸರನ್ನು ಈ ಗೌರವಕ್ಕೆ ಅವಿರೋಧವಾಗಿ ಶಿಫಾರಸು ಮಾಡಲಾಯಿತು.

ಎಐಟಿಎಯಲ್ಲಿ ಈಗಾಗಲೇ ಇಬ್ಬರು ಆಜೀವ ಗೌರವ ಅಧ್ಯಕ್ಷರಿದ್ದಾರೆ. ಅವರುಗಳೆಂದರೆ ಎಸ್.ಎಂ. ಕೃಷ್ಣ ಹಾಗೂ ಯಶವಂತ್ ಸಿನ್ಹಾ.

2016-2020ರ ಅವಧಿಗೆ ಅವಿರೋಧವಾಗಿ ಆಯ್ಕೆಯಾದ ಅಧಿಕಾರಿಗಳೆಂದರೆ: ಉಪಾಧ್ಯಕ್ಷರುಗಳು: ಅನಿಲ್ ಮಹಾಜನ್, ಭರತ್ ಓಜಾ, ಚೇತನ್ ಪಾರಿಖ್, ಸಿಎಸ್ ಸುಂದರ್ ರಾಜು, ದಲ್ಬಿರ್ ಸಿಂಗ್, ದೀಪೇಂದ್ರ ಹೂಡಾ, ಎಂಎ ಅಲಗಪ್ಪನ್, ಪ್ರವೀಣ್ ಮಹಾಜನ್, ರಾಜನ್ ಕಶ್ಯಪ್, ಶತುೃಘ್ನ ಸಿನ್ಹಾ.

ಗೌರವ ಪ್ರಧಾನ ಕಾರ್ಯದರ್ಶಿ: ಹಿರೊನ್ಮಯ್ ಚಟರ್ಜಿ.

ಗೌರವ ಜೊತೆ ಕಾರ್ಯದರ್ಶಿಗಳು: ಸುಮನ್ ಕಪೂರ್, ಅನಿಲ್ ಧೂಪಾರ್.

ಗೌರವ ಖಜಾಂಚಿ: ರಟ್ಕಿಮ್ ಸೈಕಿಯಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News