ಅಭಿನವ್‌ ಬಿಂದ್ರಾ ಶೂಟಿಂಗ್‌ನಿಂದ ಅಧಿಕೃತ ನಿವೃತ್ತಿ

Update: 2016-09-04 17:01 GMT

ಹೊಸದಿಲ್ಲಿ, ಸೆ.4: ಒಲಿಂಪಿಕ್ಸ್‌ನಲ್ಲಿ ಏಕೈಕ ಚಿನ್ನ ಜಯಿಸಿದ ಶೂಟರ್ ಅಭಿನವ್ ಬಿಂದ್ರಾ ಅವರು ಶೂಟಿಂಗ್‌ನಿಂದ ಇಂದು ಅಧಿಕೃತವಾಗಿ ನಿವೃತ್ತರಾಗಿದ್ದಾರೆ.

ಯುವ ಜನಾಂಗಕ್ಕೆ ಅವಕಾಶ ಬಿಟ್ಟುಕೊಡಲು ಇದು ಸರಿಯಾದ ಸಮಯ ಎಂಬ ಚಿಂತನೆಯೊಂದಿಗೆ ಶೂಟಿಂಗ್‌ಗೆ ವಿದಾಯ ಹೇಳಿರುವುದಾಗಿ ಬಿಂದ್ರಾ ಹೇಳಿದ್ದಾರೆ.

‘‘ ರವಿವಾರ ನನ್ನ ಪಾಲಿಗೆ ಭಾವನಾತ್ಮಕ ದಿನವಾಗಿದೆ ’’ ಎಂದು ರಾಷ್ಟ್ರೀಯ ರೈಫಲ್ ಅಸೋಸಿಯೆಶನ್ (ಎನ್‌ಆರ್‌ಎಐ)ಏರ್ಪಡಿಸಿದ್ದ ವಿದಾಯ ಸಮಾರಂಭದಲ್ಲಿ ಅವರು ಅಭಿಪ್ರಾಯಪಟ್ಟರು.

ಇತ್ತೀಚೆಗೆ ರಿಯೋ ಒಲಿಂಪಿಕ್ಸ್‌ನಲ್ಲಿ ಎರಡನೆ ಪದಕ ವಂಚಿತಗೊಂಡ ಬೆನ್ನಲ್ಲೆ ಬಿಂದ್ರಾ ಶೂಟಿಂಗ್‌ಗೆ ವಿದಾಯ ಹೇಳಿದ್ದರು. ಆರೆ ಅಧಿಕೃತವಾಗಿ ಅವರು ಹೇಳಲಿಲ್ಲ.

‘‘ ನಾನು ರಿಯೋದಲ್ಲಿ ನಾಲ್ಕನೆ ಸ್ಥಾನ ಪಡೆದೆ ಇದೀಗ ಎರಡು ದಶಕಗಳ ವೃತ್ತಿ ಬದುಕಿಗೆ ವಿದಾಯ ಪ್ರಕಟಿಸಿರುವೆ. ರಿಯೋದಲ್ಲಿ ಪದಕ ಗೆಲ್ಲಲಿಲ್ಲ. ಇದರಿಂದಾಗಿ ನಾನು ವೃತ್ತಿ ಬದುಕಿ ನಿಂದ ನಿರ್ಗಮಿಸುವ ನಿರ್ಧಾರ ಕೈಗೊಂಡೆ’’ ಎಂದು ಹೇಳಿದರು.

2008ರ ಬೀಜಿಂಗ್ ಒಲಿಂಪಿಕ್ಸ್ ಚಾಂಪಿಯನ್ ಬಿಂದ್ರಾ ಅವರು ತಮಗೆ ನ್ಯಾಶನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ ಶೂಟಿಂಗ್‌ನಲ್ಲಿ ಉತ್ತಮ ಸಾಧನೆಗೆ ನೆರವಾಗಿದೆ ಮತ್ತು ಪ್ರತಿಯೊಬ್ಬ ಶೂಟರ್‌ನಿಗೂ ಪ್ರತಿಯೊಂದು ಹಂತದಲ್ಲೂ ಬೆಂಬಲ ನೀಡುತ್ತಿದೆ ಎಂದರು.

‘‘ ನನಗೆ ಯಾವಾಗಲೂ ಕಠಿಣ ಶ್ರಮದಲ್ಲಿ ನಂಬಿಕೆಯಾಗಿದೆ. ನನಗೆ ಬೆಂಬಲ ನೀಡಿರುವ ಎಲ್ಲರಿಗೂ ಚಿರ ಋಣಿಯಾಗಿರುವೆ ಎಂದರು.

ಎನ್‌ಆರ್‌ಎಐ ಅಧ್ಯಕ್ಷ ರಣೀಂದರ್ ಸಿಂಗ್ ಅವರು ಬಿಂದ್ರಾರನ್ನು ಸನ್ಮಾನಿಸಿದರು.

2000ರಲ್ಲಿ ಸಿಡ್ನಿ ಒಲಿಂಪಿಕ್ಸ್ ಮೂಲಕ ಒಲಿಂಪಿಕ್ಸ್ ಪಯಣ ಆರಂಭಿಸಿದ ಬಿಂದ್ರಾ ಬಳಿಕ ಮೂರು ಒಲಿಂಪಿಕ್ಸ್ ಕೂಟಗಳಲ್ಲೂ ಪದಕದ ಬೇಟೆ ನಡೆಸಿದ್ದರು. ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅವರಿಗೆ ಚಿನ್ನ ಒಲಿದಿತ್ತು. ಸಿಡ್ನಿ ಮತ್ತು ಲಂಡನ್‌ನಲ್ಲಿ ನಿರಾಶೆ ಅನುಭವಿಸಿದ್ದರು. ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ ಅವರಿಗೆ ಸ್ವಲ್ಪದರಲ್ಲೇ ಪದಕ ತಪ್ಪಿ ಹೋಗಿತ್ತು.

ಪಂಜಾಬ್ ಮೂಲದ 33ರ ಹರೆಯದ ಬಿಂದ್ರಾ ಅವರು ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ ಶೂಟರ್‌ಗಳ ವೈಫಲ್ಯದ ಬಗ್ಗೆ ಎನ್‌ಆರ್‌ಎಐ ನೇಮಕ ಮಾಡಿದ್ದ ಪುನರಾವಲೋಕನಾ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಬಿಂದ್ರಾ ಈ ಸಮಿತಿಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದ್ದಾರೆ.

ತಾನು ಆಟಗಾರರನ್ನು ಕ್ರೀಡಾ ವೃತ್ತಿ ಬದುಕನ್ನು ಅಭಿವೃದ್ಧಿ ಪಡಿಸಲು ಹೆಚ್ಚು ಆಸಕ್ತಿ ವಹಿಸಿರುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News