ಅಂತಿಮ ಏಕದಿನ ಪಂದ್ಯ: ಪಾಕ್‌ಗೆ ಜಯ
ಕಾರ್ಡಿಫ್ , ಸೆ.4: ಐದನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 4 ವಿಕೆಟ್‌ಗಳ ಜಯ ಗಳಿಸಿದೆ.
ಗೆಲುವಿಗೆ 303 ರನ್ ಗಳಿಸಬೇಕಿದ್ದ ಪಾಕಿಸ್ತಾನ ತಂಡ 48.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 304 ರನ್ ಗಳಿಸಿತು.
ಪಾಕ್ ತಂಡದ ವಿಕೆಟ್ ಕೀಪರ್ ಸರ್ಫರಾಝ್ ಅಹ್ಮದ್(90)ಮತ್ತು ಶುಐಬ್ ಮಲಿಕ್ (77) ಅರ್ಧಶತಕ ದಾಖಲಿಸಿದರು.
ಇದಕ್ಕೂ ಮೊದಲು ಇಂಗ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 302 ರನ್ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡದ ದಾಂಡಿಗರು ಪಾಕ್‌ಗೆ ಕಠಿಣ ಸವಾಲು ವಿಧಿಸಿದ್ದರು.
ಆರಂಭಿಕ ದಾಂಡಿಗ ಜೇಸನ್ ರಾಯ್(87), ಸ್ಟೋಕ್ಸ್(75) ಅವರು ಅರ್ಧಶತಕ ದಾಖಲಿಸಿದ್ದಾರೆ.
ಪಾಕಿಸ್ತಾನದ ಹಸನ್ ಅಲಿ(60ಕ್ಕೆ4), ಮುಹಮ್ಮದ್ ಆಮಿರ್(50ಕ್ಕೆ3), ಉಮರ್ ಗುಲ್(77ಕ್ಕೆ1), ಇಮಾದ್ ವಸೀಮ್(33ಕ್ಕೆ1) ಸಂಘಟಿತ ಪ್ರಯತ್ನದ ಮೂಲಕ ಇಂಗ್ಲೆಂಡ್‌ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಲು ಪ್ರಯತ್ನಿಸಿದರು. ಅದರೆ ಅದು ಸಾಧ್ಯವಾಗಲಿಲ್ಲ.
ಇಂಗ್ಲೆಂಡ್‌ನ ಆಟಗಾರರು ಎಂದಿನಂತೆ ದೊಡ್ಡ ಮೊತ್ತ ದಾಖಲಿಸುವ ಕಡೆಗೆ ಗಮನ ಹರಿಸಿದರು. ರಾಯ್ ಮತ್ತು ಸ್ಟೋಕ್ಸ್ ಅವರ ಅರ್ಧಶತಕಗಳ ಕೊಡುಗೆ ಮೂಲಕ ಮಿಂಚಿದರು.
ಹೇಲ್ಸ್(23), ಮೋರ್ಗನ್(10), ಬೈರ್‌ಸ್ಟೋವ್(33), ಡಾವ್ಸನ್(10), ವೋಕೆಸ್(10), ಜೋರ್ಡನ್(ಔಟಾಗದೆ 15) ಎರಡಂಕೆಯ ಸ್ಕೋರ್ ದಾಖಲಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ
ಇಂಗ್ಲೆಂಡ್ 50 ಓವರ್‌ಗಳಲ್ಲಿ 302/9( ರಾಯ್ 87, ಸ್ಟೋಕ್ಸ್ 75; ಹಸನ್ ಅಲಿ 60ಕ್ಕೆ 4, ಆಮಿರ್ 50ಕ್ಕೆ 3).
ಪಾಕಿಸ್ತಾನ 48.2 ಓವರ್‌ಗಳಲ್ಲಿ 304/6( ಸರ್ಫರಾಜ್ ಅಹ್ಮದ್ 90, ಶುಐಬ್ ಮಲಿಕ್ 77; ವುಡ್ 56ಕ್ಕೆ2).