ಯುಎಸ್ ಓಪನ್: 307ನೆ ಗೆಲುವು ದಾಖಲಿಸಿದ ಸೆರೆನಾ

Update: 2016-09-04 18:33 GMT

ನ್ಯೂಯಾರ್ಕ್, ಸೆ.4: ಅಮೆರಿಕಾದ ನಂ.1 ಟೆನಿಸ್ ಸೆರೆನಾ ವಿಲಿಯಮ್ಸ್ ಅವರು ಯುಎಸ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಗೆಲುವು ದಾಖಲಿಸುವ ಮೂಲಕ ನಾಲ್ಕನೆ ಸುತ್ತು ತಲುಪಿದರು.

 ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಸೆರೆನಾ ಅವರು ಸ್ವೀಡನ್‌ನ ಜೊಹಾನ್ನ ಲಾರ್ಸನ್ ಅವರನ್ನು 6-2,6-1 ನೇರ ಸೆಟ್‌ಗಳಿಂದ ಮಣಿಸಿದರು. ಇದರೊಂದಿಗೆ ಅವರು ಗ್ರಾನ್ ಸ್ಲಾಮ್ ಟೂರ್ನಮೆಂಟ್‌ಗಳಲ್ಲಿ ಗರಿಷ್ಠ ವಿಜಯ ದಾಖಲಿಸಿದ ಸಾಧನೆ ಮಾಡಿದರು. 307ನೆ ಗೆಲುವಿನೊಂದಿಗೆ ಮಾರ್ಟಿನಾ ನವ್ರಾಟಿಲೋವಾ ಅವರ ಗೆಲುವಿನ ದಾಖಲೆಯನ್ನು ಹಿಂದಿಕ್ಕಿದರು. 23ನೆ ಗ್ರಾಂಡ್ ಸ್ಲಾಮ್ ಮತ್ತು ಏಳನೆ ಯುಎಸ್ ಓಪನ್ ಚಾಂಪಿಯನ್ ಪ್ರಶಸ್ತಿಯ ಮೇಲೆ ಕಣ್ಣಟ್ಟಿರುವ ಸೆರೆನಾ ವಿಲಿಯಮ್ಸ್ ಗೆಲುವಿನ ಅಭಿಯಾನವನ್ನು ಮುಂದುವರಿಸಿದ್ದಾರೆ. ಬ್ರಿಟನ್‌ನ ಆ್ಯಂಡಿ ಮರ್ರೆ ಅವರು ಇಟಲಿಯ ಪಾಲೊ ಲೊರೆಂಝ್ ವಿರುದ್ಧ 7-6(7/4), 5-7, 6-2,6-3 ಅಂತರದಿಂದ ಗೆಲುವ ಸಾಧಿಸಿ ಮುಂದಿನ ಹಂತ ತಲುಪಿದರು.
ಎರಡು ಬಾರಿ ಗ್ರಾಂಡ್ ಜಯಿಸಿದ ಮತ್ತು ಎರಡು ಬಾರಿ ನ್ಯೂಯಾರ್ಕ್‌ನಲ್ಲಿ ಸೆಮಿಫೈನಲ್ ತಲುಪಿದ್ದ ವಾವ್ರಿಂಕ ಅವರು ಬ್ರಿಟನ್ ಡ್ಯಾನ್ ಎವನ್ಸ್ ವಿರುದ್ಧ 4-6, 6-3, 6-7(6/8), 7-6(10/8) ,6-2 ಅಂತರದಿಂದ ಗೆಲುವು ಸಾಧಿಸಿದರು. ಮುಂದಿನ ಸುತ್ತಿನಲ್ಲಿ ವಾವ್ರಿಂಕಾ ಅವರು ಉಕ್ರೈನ್‌ನ ಎಲಿಯಾ ಮಾರ್ಚೆಂಕೊ ಅವರನ್ನು ಎದುರಿಸುವರು.
ಮರ್ರೆ ಅವರು ಬಲ್ಗೇರಿಯಾದ ಗ್ರಿಒರ್ ಡಿಮಿಟ್ರೊ ಅವರನ್ನು ಎದುರಿಸಲಿದ್ದಾರೆ.
 ಆರನೆ ಶ್ರೇಯಾಂಕದ ಜಪಾನ್‌ನ ಕೀ ನಿಶಿಕೋರಿ ಅವರು ಫ್ರಾನ್ಸ್‌ನ ನಿಕೊಲಾಸ್ ಮಾವುಟ್ ವಿರುದ್ಧ ಜಯ ಸಾಧಿಸಿದರು.ಮುಂದಿನ ಪಂದ್ಯದಲ್ಲಿ ಅವರಿಗೆ ಕ್ರೋವೇಶಿಯಾದ ಇವೊ ಕಾರ್ಲೊವಿಕ್ ಸವಾಲು ಎದುರಾಗಲಿದೆ.
ಜುಹಾನ್ ಮಾರ್ಟಿನ್ ಡೆಲ್ ಪೆಟ್ರೊ ಅವರು ಗಾಯದ ಸಮಸ್ಯೆಯಿಂದ ಈ ಹಿಂದೆ ತೊಂದರೆ ಅನುಭವಿಸಿ ಟೆನಿಸ್‌ನಿಂದ ದೂರವಾಗಿದ್ದರು. ಆದರೆ ಅವರು ಸ್ಪೇನ್‌ನ ಡೇವಿಡ್ ಫೆರೆರ್ ವಿರುದ್ಧ 7-6(7/3), 6-2, 6-3 ಅಂತರದಲ್ಲಿ ಗೆಲುವು ಸಾಧಿಸಿದರು.
ಮಹಿಳಾ ವಿಭಾಗದಲ್ಲಿ ಪೋಲೆಂಡ್‌ನ ಅಗ್ನಿಸ್ಕಾ ರಾಡ್ವಾಂಸ್ಕ ಅವರು ಫ್ರಾನ್ಸ್‌ನ ಕರೋಲಿನಾ ಗಾರ್ಸಿಯಾಗೆ ಸೋಲುಣಿಸಿದರು.
 ರೊಮೆನಿಯಾದ ಐದನೆ ಶ್ರೇಯಾಂಕಿತೆ ಸಿಮೊನಾ ಹಾಲೆಪ್ ಅವರು ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಕಳೆದ ವರ್ಷ ಅವರು ಸೆಮಿಫೈನಲ್‌ನಲ್ಲಿ ಫ್ಲೆವಿಯಾ ಪೆನೆಟ್ಟಾ ವಿರುದ್ಧ ಸೋತು ಅಭಿಯಾನ ಕೊನೆಗೊಳಿಸಿದ್ದರು. ಮುಂದಿನ ಪಂದ್ಯದಲ್ಲಿ ಹಾಲೆಪ್ ಅವರು ಸ್ಪೇನ್‌ನ ಕಾರ್ಲಾ ಸುಯೆರೆಝ್ ನವಾರೊ ಅವರ ಸವಾಲು ಎದುರಿಸುವರು.ನವಾರೊ ಅವರು ರಶ್ಯದ ಎಲೆನಾ ವೆಸ್ನಿನಾ ವಿರುದ್ಧ 6-4,6-3 ಅಂತರದಲ್ಲಿ ಜಯ ಗಳಿಸಿದ್ದರು.
ಆರನೆ ಶ್ರೇಯಾಂಕದ ವೀನಸ್ ವಿಲಿಯಮ್ಸ್ ಜರ್ಮನಿಯ ಲಾವುರಾ ಸಿಯಗೆಮಂಡ್ ವಿರುದ್ಧ 6-1,6-2 ಅಂತರದಲ್ಲಿ ಜಯಿಸಿ 16ನೆ ಹಂತಕ್ಕೆ ತೆರ್ಗಡೆಯಾಗಿದ್ಧಾರೆ.
,,,,,,,,,,,,,, 
 ಸಾನಿಯಾ, ಬೋಪಣ್ಣ ಮೂರನೆ ಸುತ್ತಿಗೆ
ಲಿಯಾಂಡರ್ ಪೇಸ್ ಅಭಿಯಾನ ಅಂತ್ಯ
ನ್ಯೂಯಾರ್ಕ್,ಸೆ.4: ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಟೂರ್ನಮೆಂಟ್‌ನಲ್ಲಿ ಭಾರತದ ಸಾನಿಯಾ ಮಿರ್ಝಾ ಮತ್ತು ರೋಹನ್ ಬೋಪಣ್ಣ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದ್ದಾರೆ. ಆದರೆ ಲಿಯಾಂಡರ್ ಪೇಸ್ ಸೋತು ನಿರ್ಗಮಿಸಿದ್ದಾರೆ.
 ಸಾನಿಯಾ ಮತ್ತು ಝೆಕ್ ಗಣರಾಜ್ಯದ ಬಾರ್ಬರ ಸ್ಟ್ರೈಕೋವಾ ವರು ಮಹಿಳೆಯರ ಡಬಲ್ಸ್‌ನಲ್ಲಿ ವಿಕ್ಟೋರಿಜಾ ಗೊಲುಬಿಕ್ ಮತ್ತು ನಿಕೋಲೆ ಮೆಲಿಚೇರ್ ವಿರುದ್ಧ 6-2, 7-6(5) ಸೆಟ್‌ಗಳಿಂದ ಜಯ ಗಳಿಸಿದರು.
 ಮುಂದಿನ ಸುತ್ತಿನಲ್ಲಿ ಸಾನಿಯಾ ಮತ್ತು ಬಾರ್ಬರಾ ಅವರು ನಿಕೋಲೆ ಗಿಬ್ಸ್ ಮತ್ತು ನಾವೊ ಹಿಬ್ನೊ ಅವರನ್ನು ಎದುರಿಸಲಿದ್ದಾರೆ.
ಬೋಪಣ್ಣ ಮತ್ತು ಕೆನಡಾದ ಪಾರ್ಟ್‌ನರ್ ಗ್ಯಾಬ್ರೆಲಾ ಡಾಬ್ರೊಸ್ಕಿ ಅವರು ಲುಕಸ್ ಕುಬೊಟ್ ಮತ್ತು ಆ್ಯಂಡ್ರೆಯಾ ಹ್ಲವಾಕೊವಾ ವಿರುದ್ಧ 5-7, 6-3 ಮತ್ತು 10-7 ಅಂತರದಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾದರು.
ಮುಂದಿನ ಪಂದ್ಯದಲ್ಲಿ ಅವರು ಶ್ರೇಯಾಂಕರಹಿತ ರಾಬೆರ್ಟ್ ಫರ್ರಾ ಮತ್ತು ಅನಾ-ಲೆನಾ ಗ್ರೋನೆಫೀಲ್ಡ್ ಅವರನ್ನು ಎದುರಿಸಲಿದ್ದಾರೆ.
ಹಾಲಿ ಚಾಂಪಿಯನ್ ಲಿಯಾಂಡರ್ ಪೇಸ್ ಮತ್ತು ಮಾರ್ಟಿನಾ ಹಿಂಗಿಸ್ ಅವರು ಅಮೆರಿಕದ ಏಳನೆ ಶ್ರೇಯಾಂಕದ ಕೊಕೊ ವ್ಯಾಂಡೆವೆೆ ಮತ್ತು ರಾಜೀವ್ ರಾಮ್ ಎದುರು 7-6(1), 3-6, 13-11 ಅಂತರದಲ್ಲಿ ಸೋತು ಮಿಶ್ರ ಡಬಲ್ಸ್‌ನಲ್ಲಿ ಸೋತು ಅಭಿಯಾನ ಕೊನೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News